ವಾಲ್ಮೀಕಿ ಭವನದ ಜಾಗ ಒತ್ತುವರಿ ತೆರವಿಗೆ ಸಂಸದರ ಸೂಚನೆ

ಕೋಲಾರ,ಅ,೨೯ನಗರದ ವಾಲ್ಮೀಕಿ ಸಮುದಾಯ ಭವನಕ್ಕೆ ಸೇರಿದ ಜಾಗ ಒತ್ತುವರಿಯಾಗಿದ್ದರೆ ಕೊಡಲೇ ತೆರುವು ಮಾಡಿ ಸ್ವಾಧೀನಕ್ಕೆ ಪಡೆಸಿ ಕೊಂಡು ಎಲ್ಲರನ್ನು ಸಂಘಟಿಸಿ ಕೊಂಡು ಮುಂದಿನ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು,
ನಗರದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಇಂದು ವಾಲ್ಮೀಕಿ ಜಯಂತಿ ಆಚರಿಸಲು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ವಾಲ್ಮೀಕಿ ಜಯಂತಿ ಉದ್ಘಾಟನ ಕಾರ್ಯಕ್ರಮದಲ್ಲಿ ಯಾವೂದೇ ರಾಜಕೀಯ ಮಾಡ ಬಾರದು. ರಾಜಕೀಯವನ್ನು ಚುನಾವಣೆ ಸಮಯಕ್ಕೆ ಮಾತ್ರ ಮೀಸಲಿಟ್ಟು ಉಳಿದ ಅವಧಿಯಲ್ಲಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಕೈ ಜೋಡಿಸುವಂತಾಗ ಬೇಕು. ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಕೆಲಸಗಳಿಗೆ ಎಂದಿಗೂ ಯಾರೇ ಅಗಲಿ ಅಡ್ಡಿ ಪಡಿಸಬಾರದು ಎಂದು ಹೇಳಿದರು,


ಅವಣಿ ಕ್ಷೇತ್ರ ಅಭಿವೃದ್ದಿ –
ರಾಜ್ಯದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮ್ಮದ್ ಮಾತನಾಡಿ ವಾಲ್ಮೀಕಿ ವಿಚಾರಧಾರೆಗಳ ಕುರಿತು ಅರಿವು ಮೋಡಿಸುವಂತಾಗ ಬೇಕು. ಅವರು ನೀಡಿರುವಂತ ಆದರ್ಶದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಸಾರ್ಥಕ ಪಡೆಸಿ ಕೊಳ್ಳ ಬೇಕೆಂದು ಕರೆ ನೀಡಿದರು,
ಸಮಸ್ಯೆ ಬಗೆ ಹರಿಸುವುದು ಅಧಿಕಾರಿಗಳ ಜವಾಬ್ದಾರಿ-
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ಮಹರ್ಷಿ ವಾಲ್ಮೀಕಿ ಭವನದ ಜಾಗದ ಸಮಸ್ಯೆ ಕುರಿತು ಪ್ರಾರಂಭದಲ್ಲಿಯೇ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರೆ ಇಂದು ಗೊಂದಲಗಳಿಗೆ ಅವಕಾಶ ಇರುತ್ತಿರಲಿಲ್ಲ. ಈಗಾಲಾದರೂ ಎಚ್ಚೆತ್ತು ಕೊಂಡು ಯಾರೇ ಒತ್ತುವರಿ ಮಾಡಿದ್ದರೂ ಸಹ ಮುಲಾಜಿಲ್ಲದೆ ತೆರವು ಮಾಡಿಸಿ ಸಮಸ್ಯೆಯನ್ನು ಬಗೆಹರಿಸ ಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸೂಚಿಸಿದರು,
ಅದರ್ಶಪುರುಷರ ಮೌಲ್ಯಗಳು ಜೀವನದಲ್ಲಿ ಅಳವಡಿಸಿ ಕೊಳ್ಳಿ-
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ ಇಂದಿನ ವಾಲ್ಮೀಕಿ ಜಯಂತಿ ಐತಿಹಾಸಿಕ ದಾಖಲೆಗಳಿಗೆ ಸೇರ್ಪಡೆ ಮಾಡ ಬೇಕು, ಕಳೆದ ೨೦ ವರ್ಷಗಳ ಕಾಲದ ಸುದೀರ್ಘ ಬೇಡಿಕೆಯಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಈ ಹಿಂದೆ ಆಡಳಿತ ನಡೆಸಿದ ಅವಧಿಯಲ್ಲಿ ವಾಲ್ಮೀಕಿ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು, ಈಗಾ ಇದೇ ಸಿದ್ದರಾಮಯ್ಯನವರ ಆಡಳಿತದಲ್ಲಿ ವಾಲ್ಮೀಕಿ ಭವನವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿದರು, ಶಾಸಕ ಕೊತ್ತೂರು ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಸದಸ್ಯ ಅಂಬರೀಷ್ ಪ್ರಸ್ತಾವಿಕ ನುಡಿಗಳಾಡಿದರು, ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು,
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮ ಬಸವಂತಪ್ಪ, ಎಸ್.ಪಿ. ನಾರಾಯಣ್ ಎಂ. ಕೆ.ಜಿ.ಎಫ್. ಎಸ್.ಪಿ. ಶಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ಅಧಿಕಾರಿ ಮುಂತಾದವರು ಇದ್ದರು,