ವಾಲ್ಮೀಕಿ ನೌಕರರ ಒಕ್ಕೂಟ ದಿಂದ ಕೋವಿಡ್ ಜಾಗೃತಿ

ಬಳ್ಳಾರಿ ನ 15 : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಬಳ್ಳಾರಿ ಜಿಲ್ಲಾ ಸಮಿತಿಯು ನಿನ್ನೆ “ಮಕ್ಕಳ ದಿನಾಚರಣೆ”
ಅಂಗವಾಗಿ ಅಲೆಮಾರಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಕೊರೋನಾ ಜಾಗೃತಿ ಹಾಗೂ ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಸಹಾಯಹಸ್ತ ಕಾರ್ಯಕ್ರಮಗಳನ್ನು” ಮೋಕಾ ಹಾಗೂ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡದ ವಾಲ್ಮೀಕಿ ನೌಕರರ ಒಕ್ಕೂಟದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು , ಭಾಗಿಯಾಗಿದ್ದರು ಎಂದು ಪಿ.ಮೋಹನ್ ಕಿಶೋರ್ ತಿಳಿಸಿದ್ದಾರೆ.