ವಾಲ್ಮೀಕಿ ನಾಯಕ ನೂತನ ಅಧ್ಯಕ್ಷರ ನೇಮಕ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ

ಮಾನ್ವಿ,ಜೂ.೦೩-
ರಾಯಚೂರು ಜಿಲ್ಲೆಯಲ್ಲಿ ನಮ್ಮ ಜನಾಂಗದ ಒಟ್ಟು ನಾಲ್ಕು ಶಾಸಕರು ಹಾಗೂ ಒಬ್ಬ ಸಂಸದರು ಸೇರಿದಂತೆ ಲಕ್ಷಾಂತರ ಜನಾಂಗದವರು ಇದ್ದರು ಕೂಡ ನಾವು ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಲ್ಲಿ ಬಾರಿ ಕುಂಠಿತವಾಗಿದ್ದು ಮಾತ್ರ ದುರದೃಷ್ಟಕರ ವಿಷಯವಾಗಿದೆ ಆದರಿಂದ ಸಮಾಜದಿಂದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಸಂಘಟನೆಯಿಂದ ಜನಾಂಗದರು ಜಾಗೃತರಾಗುವಂತೆ ಮಾಡುವ ಉದ್ದೇಶದಿಂದ ಮಾನವಿ ತಾಲೂಕ ನೂತನ ಅಧ್ಯಕ್ಷರನ್ನಾಗಿ ಹಂಪಯ್ಯ ನಾಯಕ ಇವರನ್ನು ನೇಮಕ ಮಾಡಲಾಗಿದೆ ಎಂದು ಹನುಮೇಶ ನಾಯಕ ಸಾದಾಪೂರು ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ನೂತನ ಅಧ್ಯಕ್ಷ ಹಂಪಯ್ಯ ನಾಯಕ ಮಾತಾನಾಡಿ ನಾನು ಸಮಾಜವನ್ನು ಸಂಘಟನೆ ಮಾಡುತ್ತೇನೆ ಎನ್ನುವ ಉದ್ದೇಶದಿಂದ ನನ್ನ ಮೇಲಿನ ಜವಾಬ್ದಾರಿಯನ್ನು ನೀಡಿದ್ದು ಅತ್ಯಂತ ಖುಷಿಯ ವಿಚಾರ ಮುಂದಿನ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂದರು. ತಾಲೂಕ ಅಧ್ಯಕ್ಷರಾಗಿ ಹಂಪಯ್ಯ ನಾಯಕ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಆಂಜನೇಯ ನಾಯಕ ನಸ್ಲಾಪೂರು ಇವರಿಗೆ ನೇಮಕ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಅಯ್ಯಪ್ಪ ನಾಯಕ ಮ್ಯಾಕಲ್, ವಿರೇಶ ನಾಯಕ ಬೆಟ್ಟದೂರು, ಚಿದಾನಂದ ಸ್ವಾಮಿ, ಅಯ್ಯಪ್ಪ ನಾಯಕ ನಲ್ಗಂದಿನ್ನಿ, ಈರಣ್ಣ, ಚಂದ್ರು, ಬಸವರಾಜ, ವೆಂಕಟೇಶ ಸೇರಿದಂತೆ ಅನೇಕರು ಇದ್ದರು.