(ಸಂಜೆವಾಣಿ ವಾರ್ತೆ)
ಹುಮನಾಬಾದ್: ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಗ್ರಂಥವನ್ನು ರಚಿಸಿ ನಾಗರಿಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು. ಸಮಾಜದ ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಹಳ್ಳಿಖೇಡ (ಕೆ) ವಾಡಿ ಆಶ್ರಮದ ದತ್ತಾತ್ರೇಯ ಸ್ವಾಮಿಜಿ, ತಹಶೀಲ್ದಾರ್ ತಬಸುಮ್, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಪಂಚಾಳ್, ತಾ.ಪಂ. ಇಒ ಡಾ.ಗೋವಿಂದ್, ಪುರಸಭೆ ಸದಸ್ಯ ಅನಿಲ್ ಪಲ್ಲೇರಿ, ಸುಭಾಷ್ ಆರ್ಯ, ನಾಗಭೂಷಣ ಸಂಗಮ, ಶಿವರಾಜ ಚೀನಕೇರಿ, ಇದ್ದರು.