ವಾಲ್ಮೀಕಿ ಜಯಂತಿ ಸರಳ ಆಚರಣೆ

ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾದ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಬಿ ವೀರಣ್ಣ, ತಾಲ್ಲೂಕು ನಾಯಕ ಸಮಾಜದ ಅದ್ಯಕ್ಷರಾದ ಹದಡಿ ಹಾಲಪ್ಪ, ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ಶ್ರೀನಿವಾಸ, ವಾಲ್ಮೀಕಿ ಯುವ ಘಟಕದ ಅದ್ಯಕ್ಷರಾದ ವಿನಾಯಕ ಪೈಲ್ವಾನ್, ಮುಖಂಡರಾದ ಆಂಜನೇಯ ಗೂರುಜೀ, ಹೂವಿನಮಾಡು ಚಂದ್ರಪ್ಪ, ವಕೀಲರಾದ ಮಂಜುನಾಥ, ಶ್ಯಾಗಲಿ ಮಂಜುನಾಥ, ಕೆಟಿಜೆ ನಗರ ಲಕ್ಷ್ಮಣ, ಶಾಮನೂರು ಪ್ರವೀಣ್, ಫಣಿಯಾಪುರ ಲಿಂಗರಾಜ್, ಐಗೂರು ಹನುಮಂತಪ್ಪ, ಆಲೂರು ಹನುಮಂತಪ್ಪ, ಅಣಜಿ ಅಂಜಿನಪ್ಪ ಇನ್ನೂ ಇತರರು ಉಪಸ್ಥಿರಿದ್ದರು.