ವಾಲ್ಮೀಕಿ ಜಯಂತಿ ಸರಳವಾಗಿ ಆಚರಿಸಲು ನಿರ್ಧಾರ

ತಾಳಿಕೋಟೆ:ಅ.19: ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವವನ್ನು ತಾಲೂಕಾಡಳಿತದ ನೇತೃತ್ವದಲ್ಲಿ ಅತ್ಯಂತ ಸರಳವಾಗಿ ಭಕ್ತಿಪೂರ್ವಕವಾಗಿ ಆಚರಿಸಲು ನಿರ್ಧರಿಸಲಾಯಿತು.
ಇದೇ ದಿ. 28 ರಂದು ಆಚರಿಸಲಾಗುತ್ತಿರುವ ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವ ಆಚರಿಸುವ ಕುರಿತು ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಹಾಗೂ ಸಮಾಜ ಬಾಂದವರ ಪೂರ್ವಭಾವಿ ಸಭೆಯಲ್ಲಿ ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ಸಭೆಯಲ್ಲಿ ಮಂಡಿಸಿದರು. ಈ ಭಾರಿ ಬರಗಾಲ ಆವರಿಸಿದ್ದರಿಂದ ಆಡಂಬರದಿಂದ ಜಯಂತ್ಯೋತ್ಸವ ಆಚರಿಸುವ ಬದಲು ಸಂಕ್ಷೀಪ್ತವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವದಕ್ಕೆ ಸಮಾಜಬಾಂದವರು ಸಮ್ಮಿತಿ ವ್ಯಕ್ತಪಡಿಸಿದ್ದರಿಂದ ಅಂದು ಬೆಳಿಗ್ಗೆ 9-30 ಗಂಟೆಗೆ ಪಟ್ಟಣದ ವಾಲ್ಮೀಕಿ ಸರ್ಕಲ್‍ದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಹಶಿಲ್ದಾರ ಕಾರ್ಯಾಲಯದಲ್ಲಿ 10 ಗಂಟೆಗೆ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದು ಮತ್ತು ವಾಲ್ಮೀಕಿ ಅವರ ಜೀವನ ಚರಿತ್ರೆ ಇಂದಿನ ಯುವ ಪಿಳಿಗೆಗೆ ಅತ್ಯವಶ್ಯವಿರುವದರಿಂದ ಉಪನ್ಯಾಸಕರಿಂದ ಅವರ ಜೀವನ ಚರಿತ್ರೆ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ವಿವರಣೆ ಕೊಡಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಈ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣೆ, ಪಿ.ಎಸ್.ಐ.ರಾಮನಗೌಡ ಸಂಕನಾಳ, ಪುರಸಭೆ ವ್ಯವಸ್ಥಾಪಕ ಯೇಸು ಬೆಂಗಳೂರ, ಸಿರಸ್ತದಾರ ಜೆ.ಆರ್.ಜೈನಾಪೂರ, ಪುರಸಭೆ ಆರೋಗ್ಯ ಇಲಾಖೆಯ ಶಿವು ಜುಮನಾಳ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್.ಎನ್.ಮಲ್ಲಾಡೆ, ಎನ್.ವ್ಹಿ.ಕೋರಿ, ಎಸ್.ಎಂ.ಕಲ್ಬುರ್ಗಿ, ವಾಲ್ಮೀಕಿ ಸಮಾಜದ ಮುಖಂಡರುಗಳಾದ ಲಕ್ಷ್ಮಣ ಕೊಡೇಕಲ್ಲ, ಕಾಶಿನಾಥ ಪಾಟೀಲ, ಯಮನಪ್ಪ ಬರದೇನಾಳ, ಸದು ಅಂಬಳನೂರ, ಮೌನೇಶ ಬಡಿಗೇರ, ಚಂದ್ರಶೇಖರ ಕೊಡೇಕಲ್ಲ, ಪ್ರಕಾಶ ಪಾಟೀಲ, ಸಂಜೀವಪ್ಪ ಬರದೇನಾಳ, ಮಲ್ಲು ಬಶೆಟ್ಟಿಹಾಳ, ದಂಡಪ್ಪ ಬಾಗೇವಾಡಿ, ರಾಮಣ್ಣ ಸೀನೇಸಪೂರ, ಬಸವರಾಜ ದೇವದುರ್ಗ, ಬಸ್ಸು ಕಟ್ಟಿಮನಿ, ಬಸವರಾಜ ಕೊಡೇಕಲ್ಲ, ಸಾಯಬಣ್ಣ ತಳ್ಳೋಳ್ಳಿ, ಯಂಕೋಬಾ ದನ್ನೂರ, ಚಿನ್ನು ಮುದ್ದೇಬಿಹಾಳ, ಮೊದಲಾದವರು ಉಪಸ್ಥಿತರಿದ್ದರು.