ವಾಲ್ಮೀಕಿ ಜಯಂತಿ ಆಚರಣೆ

ಕೋಲಾರ,ಅ.೨೯:ಹಿಂದೂ ಮಹಾ ಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಜಿಲ್ಲಾ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಗರಾಧ್ಯಕ್ಷ ಎಚ್.ಎಮ್.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ಜಿಲ್ಲಾ ವಕ್ತಾರರಾದ ಎಸ್.ಬಿ.ಮುನಿ ವೆಂಕಟಪ್ಪ, ಮಾದ್ಯಮ ಪ್ರಮುಕ್ ಕೆಂಬೋಡಿ ನಾರಾಯಣಸ್ವಾಮಿ, ಕಾರ್ಯಾಲಯ ಕಾರ್ಯದರ್ಶಿ ರಾಜೇಶ್ ಸಿಂಗ್, ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಗ್ರಾ.ಪ್ರ.ಕಾರ್ಯದರ್ಶಿ ಓಹಿಲೇಶ್, ನಾರಾಯಣ ಶೆಟ್ಟಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಶ್ರೀನಿವಾಸಪ್ಪ, ಎಚ್.ಶ್ರೀನಿವಾಸಪ್ಪ, ಬಿಜೆಪಿ ಮುಖಂಡರುಗಳಾದ ಹಾರೋಹಳ್ಳಿ ವೆಂಕಟೇಶ್, ಶ್ರೀನಿವಾಸ, ನಗರ ಕಾರ್ಯದರ್ಶಿಗಳಾದ ಸಿ. ಮಂಜುನಾಥ್, ಶುಭಕರ, ಬಜಾಜ್ ಚಂದ್ರಶೇಖರ, ಹಾಲು ಮುನಿಯಪ್ಪ, ರೂಪೇಶ್, ಟಮಕ ರಮೇಶ್, ನಾಗರಾಜ್, ಮುನಿನಾರಾಯಣ, ವೆಂಕಟರಮಣ, ಕಾರ್ಯಾಲಯ ಸಹಾಯಕ ಮಹೇಂದ್ರ, ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಮೋರ್ಚಾ ಸದಸ್ಯರು ಭಾಗವಹಿಸಿದ್ದರು.