ವಾಲ್ಮೀಕಿ ಜನಜಾಗೃತಿ ಸಮಾವೇಶ

ಕೋಲಾರ,ಆ.೯- ಕರ್ನಾಟಕ ವಾಲ್ಮೀಕಿ ಸ್ವಾಭಿಮಾನಿ ಸಂಘದ ವತಿಯಿಂದ ಕೊಪ್ಪಳ ಜಿಲ್ಲೆಯ ಹಿರೇಮನ್ನಾಪುರ ಶ್ರೀ ವಾಲ್ಮೀಕಿ ಗುರುಕುಲಾಶ್ರಮದಲ್ಲಿ ನಡೆದ ವಾಲ್ಮೀಕಿ ಜನಜಾಗೃತಿ ಸಮಾವೇಶಕ್ಕೆ ವಾಲ್ಮೀಕಿ ಸ್ವಾಭಿಮಾನಿ ಸಂಘ ಕೋಲಾರ ಜಿಲ್ಲಾ ಘಟಕದಿಂದ ಕೋಲಾರದಿಂದ ಪದಾಧಿಕಾರಿಗಳು ತೆರಳಲು ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ ಅನಿಲ್‌ಕುಮಾರ್ ಅವರುಗಳು ಬಸ್ ವ್ಯವಸ್ಥೆ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಮಾನಾಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷ ಕೆಂಚಪ್ಪ, ರಾಜ್ಯ ಕಾರ್ಯದರ್ಶಿ ನರಸಿಂಹಯ್ಯ, ಜಿಲ್ಲಾಧ್ಯಕ್ಷ ನರಸಾಪುರ ಎಂ.ಎನ್.ನಾಗರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಾಂತಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಳ್ಯ ಆನಂದನಾಯ್ಕ, ಕೋಲಾರ ತಾಲೂಕು ಅಧ್ಯಕ್ಷ ಕಿತ್ತಂಡೂರು ನಾಗರಾಜ, ಮಾಲೂರು ತಾಲೂಕು ಅಧ್ಯಕ್ಷ ಅಶೋಕ, ಮಹಿಳಾ ಘಟಕದ ಅಧ್ಯಕ್ಷೆ ಮಾಲಾ, ಕುರಗಲ್ ನಾಗರಾಜ, ಸಿದ್ಧರಾಜು, ಮಂಜುನಾಥ್ ನೇತೃತ್ವ ವಹಿಸಿದ್ದರು.