ವಾಲ್ಮೀಕಿ ಜಗತ್ತಿಗೆ ಅದರ್ಶ ತತ್ವ ನೀಡಿದ ಮಹಾನ್ ವ್ಯಕ್ತಿ- ಮಲ್ಲಿಕಾರ್ಜುನ

ಸಂಡೂರು:ನ ಅ: 1: ಪ್ರತಿಯೊಬ್ಬರೂ ಸಹ ರಾಮ ರಾಜ್ಯದ ಕನಸ್ಸನ್ನು ಕಾಣುತ್ತೇವೆ ಎಂದರೆ ಅದಕ್ಕೆ ವಾಲ್ಮೀಕಿಯವರು ಜಗತ್ತಿಗೆ ನೀಡಿದ ಬಹುದೊಡ್ಡ ಆದರ್ಶವಾಗಿದೆ, ಅದನ್ನು ಪ್ರತಿಯೊಬ್ಬರೂ ಸಹ ಪಾಲಿಸುವಂತಹ ಕಾರ್ಯ ಮಾಡಬೇಕು ಎಂದು ಹೋಂ ಗಾರ್ಡ ತಾಲೂಕು ಘಟಕಾಧಿಕಾರಿ ನರಿ ಮಲ್ಲಿಕಾರ್ಜುನ ತಿಳಿಸಿದರು.
ಅವರು ಪಟ್ಟಣದ ತಮ್ಮ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಶ್ರಮ ಮತ್ತು ಶ್ರದ್ದೆಯಿಂದ ಸಾಧನೆಯನ್ನು ಮಾಡಬಹುದು, ಅದಕ್ಕೆ ವಾಲ್ಮೀಕಿ ಬಹುದೊಡ್ಡ ಆದರ್ಶ, ಇಂದು ನಾವು ಅವರ ತತ್ವಗಳನ್ನು ಅನುಸರಿಸೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗೃಹರಕ್ಷಕ ದಳದ ಪ್ರತಿನಿಧಿಗಳು ಉಪಸ್ಥಿತರಿದ್ದರು.