ವಾಲ್ಮೀಕಿ ಆದರ್ಶ ಸಮಾಜಕ್ಕೆ ಮಾರ್ಗದರ್ಶಿ-ರಾಜಶೇಖರ್

ಮುಳಬಾಗಿಲು, ನ. 2:ಮಹರ್ಷಿ ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಸದಾಕಾಲ ಮಾರ್ಗದರ್ಶಿಯಾಗಿದೆ, ಶೋಷಿತ ಸಮುದಾಯದಲ್ಲಿ ಹುಟ್ಟಿದರೂ ಇಡೀ ಸಮಾಜಕ್ಕೆ ರಾಮಾಯಣ ಮಹಾಗ್ರಂಥವನ್ನು ರಚಿಸಿಕೊಟ್ಟ ಮಹಾನ್ ಚೇತನರಾಗಿದ್ದಾರೆ ಅವರ ಸ್ಮರಣೆ ಸಮಾಜಕ್ಕೆ ಅತ್ಯವಶ್ಯಕವಾಗಿದೆ ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಅಭಿಮತ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಹಲವಾರು ಋಷಿ ಮುನಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಉತ್ತಮ ಸಮಾಜ ನಿರ್ಮಾಣಕ್ಕೆ ಅಗಾದವಾದ ಜ್ಞಾನದ ಮೂಲಕ ಮಹಾ ಗ್ರಂಥಗಳನ್ನು ರಚಿಸಿಕೊಟ್ಟಿದ್ದಾರೆ ಎಂದರು.
ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಎ.ಪಿ.ಎಂ.ಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ಆರ್.ಐಗಳಾದ ಜಿ.ಸುಬ್ರಮಣಿ, ಸಾದತ್ತುಲ್ಲಾಖಾನ್, ಮಂಜುನಾಥ್, ಶ್ರೀ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಬೈರಕೂರು ರಾಮಾಂಜಿ, ಮುಖಂಡರಾದ ಕೊತ್ತಮಂಗಲ ರಾಮಚಂದ್ರಪ್ಪ, ಕುನಿಬಂಡೆ ಚಂದ್ರಪ್ಪ, ವೆಂಕಟರಾಮ್, ನಿವೃತ್ತ ಎ.ಎಸ್.ಐ ರಾಮಚಂದ್ರಪ್ಪ, ತಾ.ಪಂ ಮಾಜಿ ಸದಸ್ಯೆ ಬಿ.ಲಕ್ಷ್ಮಿದೇವಮ್ಮ, ಸಾತನೂರು ಶ್ರೀನಿವಾಸಯ್ಯ, ಮತ್ತಿತರರು ಇದ್ದರು.