ವಾಲ್ಮೀಕಿಯ ಅದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ- ಡಿ.ಕೃಷ್ಣಪ್ಪ

ಸಂಡೂರು :ನ:1: ವಾಲ್ಮೀಕಿ ಮಹರ್ಷಿಗಳು ಕೊಟ್ಟ ಕೊಡುಗೆ ಅಪಾರ ಅವರು ರಚಿಸಿದ ರಾಮಾಯಣ ಮಾನವ ಕುಲದ ಮಾರ್ಗದರ್ಶಕದಂತಿದ್ದು ಪ್ರತಿಯೊಬ್ಬರೂ ಸಹ ತಿಳಿದು ನಡೆದಾಗ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಧ್ಯಕ್ಷ ಡಿ.ಕೃಷ್ಣಪ್ಪ ತಿಳಿಸಿದರು.
ಅವರು ಇಂದು ಪಟ್ಟಣದ ವಾಲ್ಮೀಕಿ ಮಂದಿರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಮಾಜದ ಅಭಿವೃದ್ದಿಗೆ ನಿರಂತರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು ಪ್ರತಿಯೊಬ್ಬರೂ ಸಹ ಅದರ ಸದುಪಯೋಗ ಪಡೆದುಕೊಳ್ಳಬೇಕು, ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ಸಾಗಿಸಲು ನಾಂದಿಯಾಗಬೇಕು, ಅಲ್ಲದೆ ಸರ್ಕಾರದ ಹಂತದಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿಯನ್ನು ಹೆಚ್ಚಿಸುವಂತಹ ಬಹಳಷ್ಟು ಒತ್ತಡವನ್ನು ಹಾಕಿದ್ದು ಮುಂದಿನ ದಿನಗಳಲ್ಲಿ ಅದನ್ನು ಪಡೆಯಲಾಗುವುದು, ಅಲ್ಲದೆ ಪ್ರತಿಯೊಬ್ಬರೂ ಸಹ ಶಿಕ್ಷಣ ಪಡೆದು ಉತ್ತಮ ಮಾರ್ಗದಶಲ್ಲಿ ಸಾಗಬೇಕು, ಶಿಕ್ಷಣ ನಮ್ಮ ಶಕ್ತಿ ಎಂಬುದನ್ನು ಮರೆಯಬಾರದು, ಅದಕ್ಕಾಗಿ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನವನ್ನು ತಾಲೂಕಿನಲ್ಲಿ ಮಾಡಲಾಗಿದೆ, ಯಾರೂ ಸಹ ಶಿಕ್ಷಣದಿಂದ ಹಿಂದೆ ಉಳಿಯಬಾರದು ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಶಾಸಕ ಈ.ತುಕರಾಂ ಅವರು ಮಾತನಾಡಿ ಸಮಾಜದ ಸಂಘಟನೆಯ ಮೂಲಕ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯ, ಅದ್ದರಿಂದ ಇಂದು ಪ್ರತಿಯೊಬ್ಬರೂ ಸಹ ಜಯಂತಿಯಲ್ಲಿ ಭಾಗವಹಿಸಿ ವಾಲ್ಮೀಕಿ ಮಹರ್ಷಿಗಳ ಅದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮುಖಂಡರಾದ ಜೆ.ಬಿ.ಟಿ. ಬಸವರಾಜ, ವಸಂತಕುಮಾರ್, ಡಿ.ರಾಘವೇಂದ್ರ, ಜಯಣ್ಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎನ್.ಕೆ. ವೆಂಕಟೇಶ್ ಇತರ ಹಲವಾರು ಸಮಾಜದ ಗಣ್ಯರು ಉಪಸ್ಥಿತರಿದ್ದು ವಾಲ್ಮೀಕಿ ಮಹರ್ಷಿಗಳ ಮೂರ್ತಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಯಿತು.