ವಾಲ್ಮೀಕಿಯವರ ಅದರ್ಶ ಪಾಲನೆ ಅಗತ್ಯ – ರಾಜಾವೆಂಕಟಪ್ಪ ನಾಯಕ

ಮಾನ್ವಿ.ನ.೫- ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರು ಇಡೀ ಜಗತ್ತಿಗೆ ಅದರ್ಶರಾಗಿದ್ದು ಅವರ ತತ್ವ ಅದರ್ಶಗಳು ಪ್ರತಿಯೂಬ್ಬರ ಜೀವನದಲ್ಲಿ ಅಳವಡಿಸಿಕೂಳ್ಳಬೇಕಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಬುಧವಾರ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿನ ಆದರ್ಶ ಮೌಲ್ಯಗಳು ವಿಶ್ವ ಮನುಕುಲಕ್ಕೆ ದಾರಿ ದೀಪ ವಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿಯ ವಾಲ್ಮೀಕಿಯವರು ಒಂದೇ ಜಾತಿಗೆ ಸೀಮಿತವಾಗಿಲ್ಲ ಎಲ್ಲ ಜಾತಿ ವರ್ಗದ ಜನರಿಗೆ ಸೀಮಿತವಾಗಿದ್ದಾರೆ. ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ದಿವಂಗತ ಮಾಜಿ ಸಂಸದ ಅಂಬಣ್ಣ ನಾಯಕರವರು ಪರಿಶಿಷ್ಟ ಪಂಗಡದ ೫ ಉಪಜಾತಿಗಳನ್ನು ಶೈಕ್ಷಣಿಕ, ಅರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ದಿ ಹೂಂದಲು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ದಿ ಹೂಂದಲು ಕಾರಣೀಭೂತರಾಗಿದ್ದಾರೆ. ೭.೫ ಮೀಸಲಾತಿಯು ಕೇಂದ್ರ ಸರ್ಕಾರ ಕೂಟ್ಟಿದೆ. ರಾಜ್ಯದಲ್ಲಿ ಮಾತ್ರ ಮೀನಾಮೇಷ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ವಾಲ್ಮೀಕಿ ಗುರುಗಳ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಮಾಡಿದರ ಫಲವಾಗಿ ರಾಜ್ಯ ಸರ್ಕಾರ ಎಚ್ಚೆತು ಭರವಸೆ ನೀಡಿದೆ ಎಂದರು.
ಈ ವೇಳೆ ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಎಲ್ಲಾ ಜನಾಂಗದ ಅರಿತು ಮಹಾನ ಗ್ರಂಥವನ್ನು ರಚಿಸಿದ್ದಾರೆ. ಅವರು ಇಡೀ ದೇಶಕ್ಕೆ ಅದರ್ಶ ವ್ಯಕ್ತಿಯಾಗಿದ್ದಾರೆ. ಅದರಿಂದ ಸಮಾಜದ ಪ್ರಗತಿ ಹಾಗೂ ಬಡತನ ನಿರ್ಮೂಲನೆಗೆ ಪ್ರತಿಯೂಬ್ಬರು ಮಕ್ಕಳಿಗೆ ಶಿಕ್ಷಣ ಕೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಈ ವೇಳೆ ಕಾಂಗ್ರೇಸ್ ಮುಖಂಡ ಶರಣಯ್ಯ ನಾಯಕ ಗುಡದಿನ್ನಿ, ನಿವೃತ್ತ ನ್ಯಾಯದೀಶ ಗಿರೆಯ್ಯ ಪಾಟೇಲ್, ಸಿಂಡಿಕೇಟ್ ಸದಸ್ಯ ಕೋಟ್ರೇಶಪ್ಪ ಕೋರಿ, ನ್ಯಾಯದೀಶ ಶ್ಯಾಮ ಸುಂದರ ನಾಯಕ, ಟಿಎಪಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಭೋಗಾವತಿ ವಾಲ್ಮೀಕಿ ಸಂಘಟನೆ ಜಿಲ್ಲಾಧ್ಯಕ್ಷ ಬುಡ್ಡಪ್ಪ ನಾಯಕ, ಬಿಜೆಪಿ ಎಸ್.ಟಿ.ಮೋರ್ಚ ಜಿಲ್ಲಾಧ್ಯಕ್ಷ ಅಯ್ಯಪ್ಪ ನಾಯಕ ಮ್ಯಾಕಲ್, ವಾಲ್ಮೀಕಿ ಮಹಾಗುರು ಅತ್ಮನಂದ ಮಹಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರೇಶ ನಾಯಕ ಬೆಟ್ಡದೂರು, ಜೆಡಿಎಸ್ ತಾಲೂಕ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೇಲ್, ಗುರುನಾಥ ದೂರೆ, ಕೆ.ನರಸಿಂಹ ನಾಯಕ ಕರಡಿಗುಡ್ಡ, ಬುಡ್ಡಪ್ಪ ನಾಯಕ , ಎಂ.ಬಿ.ನಾಯಕ, ಶರಣಬಸವ ನಾಯಕ, ರಾಮಣ್ಣ ನಾಯಕ,, ಲಕ್ಷ್ಮಿ ದೇವಿ ನಾಯಕ, ಹನುಮೇಶ ನಾಯಕ ಜೀನೂರು, ಗೋಪಾಲ ನಾಯಕ, ಮಲ್ಲಿಕಾರ್ಜುನ ಪಾಟೇಲ್ ಸಂಗಾಪೂರು, , ಲಕ್ಷ್ಮಣ ಗೌಡ, ತಿಮ್ಮಣ್ಣ ನಾಯಕ, ವೀರನಗೌಡ, ಈರಣ್ಣ ನಾಯಕ, ಗೋಪಾಲ ನಾಯಕ ಜೂಕೂರು, ಸಂಗಾಪೂರು ವಾಲ್ಮೀಕಿ ಯುವ ಬಳಗ ಮುಖಂಡರು ಉಪಸ್ಥಿತರಿದ್ದರು.