ವಾಲ್ಮೀಕಿಯತತ್ವಗಳು ಪ್ರತಿಯೊಬ್ಬರೂ ತಿಳಿಯುವ ರೀತಿಯಲ್ಲಿ ಜಯಂತಿ ಆಚರಣೆಯಾಗಲಿ- ಈ.ತುಕರಾಂ


ಸಂಜೆವಾಣಿ ವಾರ್ತೆ
ಸಂಡೂರು: ಅ: 18: ವಾಲ್ಮೀಕಿ ಸಮಾಜ ತನ್ನದೇ ಅದ ಸಂಸ್ಕೃತಿ ಮೌಲ್ಯಗಳನ್ನು ಹೊಂದಿದ್ದು, ವಾಲ್ಮೀಕಿ ಜಯಂತಿ ಮಾನವ ಕುಲಕ್ಕೆ ಹಿತವನ್ನು ಬಯಸುವುದೇ ಜಯಂತಿಯ ಉದ್ದೇಶವಾಗಿದೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಛೇರಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಎಲ್ಲಾ ಸಂಘಟನೆಗಳು ಹಾಗೂ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಜಯಂತಿಗಳಿಂದ ಶಾಂತಿಸಿಗಲು ಸಾಧ್ಯ ನಾನು ಎಲ್ಲಾ ಸಮುದಾಯದ ಶಾಸಕನೇ ಹೊರತು ವಾಲ್ಮೀಕಿ ಸಮಾಜಕ್ಕೆ ಮಿಸಲು ಅಲ್ಲ, ಜಯಂತಿಯಲ್ಲಿ ಕೋಲಾಟ, ಡೊಳ್ಳು ಕುಣಿತ ಇರಲಿ ಡಿ.ಜಿ. ಸೆಟ್ ಬೇಡ ಸಂಡೂರಿನ ಪರಿಸರಕ್ಕೆ ನಾವು ಗೌರವಾನ್ವಿತರಾಗಬೇಕಾಗಿದೆ. ಪಾಪಿಯ ಹಣದಿಂದ ಜಯಂತಿ ಆಚರಿಸುವುದು ಬೇಡ, ನನಗೆ ರಾಜಕೀಯ ಬೇಡ ಬುದ್ದ ಬಸವ ಅಂಬೇಡ್ಕರ್ ತತ್ವ ಆಚರಿಸೋಣ, ಸಂಡೂರು ವಾಲ್ಮೀಕಿ ಸಿರಿ ಪ್ರಶಸ್ತಿಯನ್ನು ನೀಡಲು ಮುಂದಾಗಿದ್ದು ಅದಕ್ಕೆ ಬೇಕಾದ ಹಣವನ್ನು ಎಂ.ಎಲ್.ಎ ಅನುದಾನದಲ್ಲಿ ನೀಡಲಾಗುವುದು, ಅಲ್ಲದೆ ಅಂದಿನ ಊಟ ಮತ್ತು ಬೆಳಗಿನ ವ್ಯವಹಾರ ನೀರಿನ ವ್ಯವಸ್ಥೆಯನ್ನು ಮಾಡುತ್ತೇನೆ, ಅಲ್ಲದೆ ತಾಲೂಕಿನ ಎಸ್.ಎಸ್.ಎಲ್.ಸಿ., ಪಿ.ಯುಸಿ, ಪದವಿ ವಿದ್ಯಾರ್ಥಿಗಳಿಗೆ (ವಾಲ್ಮೀಕಿ ಸಮಾಜದ) ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಸನ್ಮಾನಿಸೋಣ, ಸಮಾಜಕ್ಕೆ ಕಪ್ಪು ಚುಕ್ಕೆ ಬಾರದಂತೆ ಆಚರಿಸಿ ಬಡವರ ಕಣ್ಣೀರು ಒರೆಸುವುದು ಜಯಂತಿ, ಉತ್ತಮ ಸಮಾಜ ಕಟ್ಟುವುದೇ ದೇವರ ಕೆಲಸ, ಹೆಚ್ಚು ದೇವ ಗಂಟೆ ಬಾರಿಸುವುದಕ್ಕಿಂತ ಶಾಲೆಯ ಗಂಟೆ ಬಾರಿಸುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು ತಾಲೂಕಿನ ಎಲ್ಲಾ ಸಮಾಜದವರಿಗೆ ಡಿಜಿಟಲ್ ಗ್ರಂಥಾಲಯವನ್ನು ಮಾಡಲಾಗುವುದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ, ಸಂಘಟನೆಗಳ ಸಹಕಾರದಿಂದ ಜಯಂತಿಯನ್ನು ಸಾಮೂಹಿಕವಾಗಿ ಆಚರಿಸೋಣ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್‍ಕುಮಾರ ಅವರು ಮಾತನಾಡಿ ಒಂದು ಇಲಾಖೆಗೆ ನೀರು, ಪುರಸಭೆಗೆ ವೇದಿಕೆ ಮತ್ತು ಚೇರ್ ವ್ಯವಸ್ಥೆ ಹೀಗೆ ಎಲ್ಲಾ ಇಲಾಖೆಗಳಿಗೂ ಕೆಲಸ ಹಂಚಿ ಅವರೇ ಅ ಖರ್ಚನ್ನು ಭರಿಸಬೇಕೆಂದು ತಿಳಿಸಿದರು, ಪ್ರಮುಖವಾಗಿ ಕಲಾವಿದರನ್ನು ಕರೆಸುವುದು, 2 ಸಾವಿರ ಬ್ಯಾಡ್ಜ್, ಬ್ಯಾನರ್, ವಿದ್ಯಾರ್ಥಿಗಳಿಗೆ ಸನ್ಮಾನ, ಅತಿಥಿಗಳಿಗೆ ಸನ್ಮಾನದ ಸಲಕರಣೆ, ಮೆರವಣಿಗೆ, ವಿದ್ಯುತ್ ದೀಪದ ಅಲಂಕಾರದ ವ್ಯವಸ್ಥೆಗಳನ್ನು ಸಹ ಮಾಡಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಜಯಣ್ಣ ನವಲೂಟಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಅಂದರೆ ಅದ್ದೂರಿ ಶ್ರೇಷ್ಠತೆ ಮುಖ್ಯ ಸರ್ಕಾರದ ಹೊಣೆಗಾರಿಕೆಗೆ ಇಲಾಖೆಗೆ ಹೊಣೆಗಾರಿಕೆ ವಹಿಸಿ ಅದ್ದೂರಿಯಾಗಿ ಮಾಡಬೇಕಾಗಿದೆ ಎಂದರು. ಕೆ.ಅರ್. ಕುಮಾರಸ್ವಾಮಿ ನಾಟಕವಾಡಿಸಬೇಕೆಂದರು, ವದ್ದಟ್ಟಿ ಅಂಬರೀಶ್ ಉಪನ್ಯಾಸಕರು ಮೊದಲು ನಿಗದಿ ಮಾಡಿ ನಂತರ ಮೆರವಣಿಗೆ ಎಂದರು. ಸಿ.ಎಂ. ಸಿಗ್ಗಾವಿ ಪ್ರತಿವರ್ಷದಂತೆ ಅಚರಣೆಯಾಗಲಿ ಸಾಂಸ್ಕೃತಿಕ ಹಬ್ಬದ ಉತ್ಸವದಂತಾಗಬೇಕು ಎಲ್ಲಾ ಸಮುದಾಯದ ಸೇರಿ ಆಚರಿಸಬೇಕು ಎಂರು. ವಸಂತಕುಮಾರ ಪ್ರಶಸ್ತಿಯನ್ನು ಉತ್ತಮ ರೀತಿಯಲ್ಲಿ ನೀಡಿ ಗೌರವಿಸಬೇಕು ಸಂದೇಶ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.