ವಾಲ್ಪಾಡಿಯ ಸೆಟ್ಲಬೆಟ್ಟು-ಮಾಡದಂಗಡಿ ಸಂಪರ್ಕ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಶಿಲಾನ್ಯಾಸ

ಮೂಡುಬಿದಿರೆ , ಎ. ೨೨- ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ ೨.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೆಟ್ಲಬೆಟ್ಟುವಿನಿಂದ ಮಾಡದಂಗಡಿ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಸಂಪರ್ಕ ರಸ್ತೆಯು ವಾಲ್ಪಾಡಿ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾಗಿದೆ. ಹಿಂದೆ ಒಂದು ಸುತ್ತಾಗಿ ವಾಲ್ಪಾಡಿಗೆ ತಲುಪಬೇಕಾಗಿತ್ತು
ಆದರೆ ೨ ಕಿ.ಮೀ ದೂರದ ವ್ಯವಸ್ಥಿತವಾದ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಯೋಗ ಕೂಡಿ ಬಂದಿದ್ದರಿಂದ ಗ್ರಾಮಸ್ಥರಿಗೆ ವಾಲ್ಪಾಡಿಗೆ ತಲುಪಲು ಸುಲಭದ ದಾರಿಂii ಅವಕಾಶ ಲಭಿಸುತ್ತದೆ ಎಂದರು.
ವಾಲ್ಪಾಡಿ ಗ್ರಾ.ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಗಣೇಶ್ ಬಿ.ಅಳಿಯೂರು, ಭವಾನಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಗುತ್ತಿಗೆದಾರ ನವೀನ್ ಹೆಗ್ಡೆ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.