ವಾಲಿ ಶ್ರೀ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ಬೀದರ್,ಮೇ.09: ನಗರದ ವಾಲಿಶ್ರೀ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಯಲ್ಲಿ 891ನೇ ಬಸವ ಜಯಂತಿ ಉತ್ಸವ ಅಂಗವಾಗಿ ಲಿಂಗೈಕ್ಯ ಶಂಕುತಲಾ ವಾಲಿಯವರ ಸ್ಮರಣಾರ್ಥ ನಿಮಿತ್ಯ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಶಿಬಿರವನ್ನು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಾಲಿಶ್ರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಆದೀಶ ಆರ್ ವಾಲಿ ಹಾಗೂ ಬಸವ ಜಯಂತಿ ಉತ್ಸವ ಸಮಿತಿಯ ಖಜಾಂಚಿ ವಿರೂಪಾಕ್ಷ ಗಾದಗಿ, ಗೌರವಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಸವ ಸಮಿತಿಯ ಪದಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬಂದ್ಧಿ ವರ್ಗದವರು ಭಾಗವಹಿಸಿದರು.