
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.01: ಬಳ್ಳಾರಿ ಜಿಲ್ಲೆಯಲ್ಲಿ ನಡೆದ 2023-24ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ “ಜಿಲ್ಲಾ ವಾಲಿಬಾಲ್” ಕ್ರೀಡಾಕೂಟದಲ್ಲಿ ನಗರದ ಚಾಗಿನರಸಮ್ಮ ನರಸಯ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬೀದರನಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಚಾಗಿಸುಬ್ಬಯ್ಯ, ಮುಖ್ಯಗುರು ಐ.ವೆಂಕಟಲಕ್ಷ್ಮಿ, ದೈಹಿಕ ಶಿಕ್ಷಕ ಕಿರಣ್, ಶಿಕ್ಷಕರಾದ ಎಂ. ಆಂಜನೇಯ, ವಾಮದೇವ ಇದ್ದರು.