ವಾಲಿಬಾಲ್-ಮಾಲೂರು ಫ್ರೆಂಡ್ಸ್ ಪ್ರಥಮ

ಮಾಲೂರು.ಜ೧೨-ಮಾಸ್ಟರ್ ಸ್ಪೋಟ್ಸ್ ಕ್ಲಬ್ ವತಿಯಿಂದ ದಿ.ಚೇತನ್ ರವರ ಜ್ಞಾಪಕಾರ್ತಕವಾಗಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಮಾಲೂರು ಪ್ರಂಡ್ಸ್ ತಂಡವು ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.
ಮಾಸ್ಟರ್ ಸ್ಪೋಟ್ಸ್ ಕ್ಲಬ್ ವತಿಯಿಂದ ದಿ.ಚೇತನ್ ರವರ ಜ್ಞಾಪಕಾರ್ತಕವಾಗಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ೩೦ ವಾಲಿಬಾಲ್ ತಂಡಗಳು ಭಾಗವಹಿಸಿ ಸೆಣಸಿನ ಆಟ ಆಡಿದರು. ವಾಲಿಬಾಲ್ ಪಂದ್ಯಾವಳಿಗಳಿಗೆ ಯುವ ಮುಖಂಡ ಸುನೀಲ್ ನಂಜೇಗೌಡ ಹಾಗೂ ಸಂಜೀವಿನ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಹೂಡಿ ವಿಜಯಕುಮಾರ್ ಚಾಲನೆ ನೀಡಿದರು. ಮೊದಲ ಬಹುಮಾನವನ್ನು ಮಾಲೂರು ಪ್ರಂಡ್ಸ್ ಕ್ಲಬ್-೩೦ ಸಾವಿರ ನಗದು ಹಾಗೂ ಆಕರ್ಷಕಟ್ರೋಪಿ ಪಡೆದರೆ ದ್ವಿತೀಯ ಬಹುಮಾನಬೆಂಗಳೂರಿನ ಗೋಲ್ಡನ್ ಈಗಲ್ ತಂಡವು ೨೦ ಸಾವಿರ ನಗದು ಹಾಗೂ ಆಕರ್ಷಕಟ್ರೋಪಿ ಪಡೆದರೆ, ತೃತೀಯ ಬಹುಮಾನವನ್ನು ಮಾಲೂರಿನ ಮಾಸ್ಟರ್ ಸ್ಪೋಟ್ಸ್ ಕ್ಲಬ್ ತಂಡವು ೧೫ ಸಾವಿರ ನಗದು ಹಾಗೂ ಆಕರ್ಷಕಟ್ರೋಪಿ, ನಾಲ್ಕನೇ ಬಹುಮಾನವನ್ನು ಮಾಸ್ಟರ್ ಸ್ಪೋಟ್ಸ್ ಕ್ಲಬ್ ತಂಡವು ೧೦ ಸಾವಿರ ನಗದು ಹಾಗೂ ಆಕರ್ಷಕಟ್ರೋಪಿಯನ್ನು ಪಡೆದರು.
ಈ ಸಂದರ್ಭದಲ್ಲಿ ಎಂ.ವಿ.ನಾಗರಾಜು, ಟಿ.ಕೆ.ಗೋವಿಂದಗೌಡ, ಗೋವಿಂದಸ್ವಾಮಿ, ಸೈಯದ್ ಮೆಹಬೂಬ್, ಶ್ರೀನಾಥ್, ವಿಜಯಕುಮಾರ್, ಮಾಸ್ಟರ್ ಸ್ಪೋಟ್ಸ್ ಕ್ಲಬ್‌ನ ಮದನ್ ಕುಮಾರ್, ಕುಮಾರ್, ಗಂಗಾಧರ್, ನವೀನ್ ಇನ್ನಿತರರು ಹಾಜರಿದ್ದರು.