ವಾಲಿಬಾಲ್ ಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

ಕಲಬುರಗಿ,ನ.03: ಗುಲಬರ್ಗಾ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದಲ್ಲಿ ರಾಜ್ಯ ಮಟ್ಟದ 18 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಕ್ರೀಡೆಯಲ್ಲಿ ವಿಶೇಷ ತರಬೇತಿ ನಡೆಯುತ್ತಿದ್ದು ಶಿಬಿರಕ್ಕೆ ಶ್ರೀ ಗೋಪಾಲದೇವ್ ಜಾಧವ ಮೆಮೋರಿಯಲ್ ಟ್ರಸ್ಟ್ ಕ್ರೀಡಾಪಟುಗಳಿಗೆಳಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರ ಮತ್ತು ಟಿಎ, ಡಿಎಯನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕುಲಸಚಿವರು (ಮೌಲ್ಯಮಾಪನ) ಪ್ರೊ. ಡಿ.ಎಂ. ಜ್ಯೋತಿ, ಸಿಂಡಿಕೆಟ್ ಸದಸ್ಯರಾದ ಗಂಗಾಧರ್ ನಾಯಕ್, ಡಾ. ಮುನಿರ್, ಡಾ. ಎ.ಪಿ. ಹೊಸಮನಿ, ಸ್ಥಳಿಯ ಅಭಿಯಂತರ ಜಯ ಪ್ರಕಾಶ್ ಕರ್ಜಿಗಿ, ಡಾ. ಎನ್.ಜಿ. ಕಣ್ಣೂರ್, ನಿರ್ದೇಶಕ ಬಾಬರ್ ಖಾನ್, ತರಬೇತಿದಾರದಾರರಾದ ಡಾ. ಎಂ.ಎಸ್. ಪಾಸೋಡಿ, ಮೋಸಿನ್, ಖಾದ್ರಿ ಅವರು ಭಾಗವಹಿಸಿ ಎಲ್ಲ ಕ್ರೀಡಾಪಟುಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು.