ರಾಯಚೂರು.ಅ.೨೭- ೬೭ ನೇ ರಾಷ್ಟ್ರ ಮಟ್ಟದ ವಾಲಿಬಾಲ್ (ಟೂರ್ನ ಮೆಂಟ್) ಪಂದ್ಯಾವಳಿ ಅಕ್ಟೋಬರ್ ೩೧ ರಿಂದ ನವೆಂಬರ್ ೪ ರವರೆಗೆ ಶ್ರೀನಗರ, ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ೧೭ ವರ್ಷದ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾವಳಿಗಳ ವಿಭಾಗದ ರೆಫರೀಯಾಗಿ ನಯಾ ಮದರಸಾ ಶಾಲೆಯ ಹಿರಿಯ ದೈಹಿಕ ಶಿಕ್ಷಕ ಮುಕ್ತಾರ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ, ಸದಸ್ಯರು, ದೈಹಿಕ ಶಿಕ್ಷಕರು ಹಾಗೂ ಪ್ರೌಢ ಶಾಲೆಯ ಗ್ರೇಡ್-೧ ಮತ್ತು ಗ್ರೇಡ್-೨ ದೈಹಿಕ ಶಿಕ್ಷಕರ ಸಂಘ ರಾಯಚೂರು, ಅನುದಾನಿತ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಅಧ್ಯಕ್ಷ, ಸದಸ್ಯರು, ದೈಹಿಕ ಶಿಕ್ಷಕ ಸಂಘ,ಅನುದಾನ ರಹಿತ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ ಅಧ್ಯಕ್ಷ,ಸದಸ್ಯರು ಹಾಗೂ ರಾಯಚೂರು ತಾಲೂಕಿನ ದೈಹಿಕ ಶಿಕ್ಷಕರ ಬಳಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.