ವಾಲಿಬಾಲ್ ಕ್ರೀಡಾಕೂಟಕ್ಕೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ತಾಳಿಕೋಟೆ:ಆ.30: ಮುದ್ದೇಬಿಹಾಳದ ಶ್ರೀ ರೇವಣಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಮುದ್ದೇಬಿಹಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ವಾಲಿಬಾಲ್ ಕ್ರೀಡಾಕೂಟದಲ್ಲಿ ಮೈಲೇಶ್ವರದ ಬ್ರಿಲಿಯಂಟ್ ಪ್ರಾಥಮಿಕ ಶಾಲೆಯ ಮಕ್ಕಳು ಫೈನಲ್ ಪಂದ್ಯದಲ್ಲಿ ಎಚ್.ಪಿ.ಎಸ್.ಲಿಂಗದಳ್ಳಿ ಶಾಲಾ ಮಕ್ಕಳ ವಿರುದ್ದ 21-17 ನೇರ ಸೆಟ್‍ನೊಂದಿಗೆ 4 ಅಂಕಗಳ ಅಂತರದಿಂದ ರೋಚಕ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಹಾಗೂ ಬ್ರಿಲಿಯಂಟ್ ಶಾಲೆಯ ಶೈಕ್ಷಣಿಕ ಮಾರ್ಗದರ್ಶಿಗಳು, ಮುಖ್ಯೋಪಾಧ್ಯಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.