ವಾರ್ಷಿಕ ಸ್ನೇಹ ಸಮ್ಮೇಳನ


ನವಲಗುಂದ,ಮಾ.3: ಡಿಸಿಎಂ ಎಜ್ಯುಕೇಷನ್ ಸೊಸೈಟಿ ಅವರು ಬಿತ್ತಿದ ಶೈಕ್ಷಣಿಕ ಬೀಜ ಇಂದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದೆ. ವಿದ್ಯಾದಾನಕ್ಕಿಂತ ಹಿರಿದಾದ ಪುಣ್ಯದ ದಾನ ಇನ್ನೊಂದಿಲ್ಲ ಈ ಸೇವೆಗೆ ಯಾರೂ ಬೆಲೆ ಕಟ್ಟುವುದು ಸಾಧ್ಯವಿಲ್ಲ ಎಂದು ಅಣ್ಣಿಗೇರಿ-ಭಂಡಿವಾಡದ ಡಾ. ಎ ಸಿ ವಾಲಿಮಹಾರಾಜರು ನುಡಿದರು.
ಅವರು ನಗರದ ಡಿಸಿಎಂ ಎಜ್ಯುಕೇಷನ್ ಸೊಸೈಟಿ, ಗುರುಕುಲ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಪಿಎಂಡಿ ಪ್ರೈಮರಿ ಮತ್ತು ಪ್ರೀ- ಪ್ರೈಮರಿ ಸ್ಕೂಲ್‍ನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಮಹಾಸರಸ್ವತಿ ಪೂಜಾ ಹಾಗೂ ಗುರುಕುಲ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಎಂದೂ ಮರೆಯಬೇಡಿ. ಶಾಲೆಗೆ ಮರಳಿ ಕೊಡುಗೆ ನೀಡಿ ಎಂದು ಆಶೀರ್ವಚನ ನೀಡಿದರು.
ಮುಖ್ಯಅತಿಥಿಗಳಾದ ಹೈಕೋರ್ಟ ನ್ಯಾಯವಾದಿ ಸಿ ಎಸ್ ಪಾಟೀಲ್ ಮಾತನಾಡಿದರು>
ಇದೆ ವೇಳೆ 2022 23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಅತ್ಯುತ್ತಮ ಅಂಕ ಗಳಿಸಿದ ಪವಿತ್ರ ಯಲಬುರ್ಗಿಮಠ ಅವರನ್ನು ಮತ್ತು ಈ ವರ್ಷದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಾಲ ಪ್ರತಿಭೆ, ಚಿತ್ರ ನಟಿ ಶಾರ್ವರಿ.ವಿ, ಸಂಜಯಕುಮಾರ ಸಜ್ಜನ, ಗುರು ಪ್ರಸಾದ ಕುರುಡಗಿ, ಎಸ್ ವಿ ಮುದಿಗೌಡ, ಅಶೋಕ್ ಮಜ್ಜಿಗುಡ್ಡ, ಸುಕೇತ ದಾಡಿಬಾವಿ, ಚಂದ್ರಶೇಖರ್ ದಾಡಿಬಾವಿ, ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಹೆಗಡೆ, ಈಶ್ವರಪ್ಪ ಉಳ್ಳಾಗಡ್ಡಿ, ದೇವರಾಜ ದಾಡಿಬಾವಿ, ಶೋಭಾ ದಾಡಿಭಾವಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು