ವಾರ್ಷಿಕ ಸ್ನೇಹಸಮ್ಮೇಳನ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜ25: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ವಿವಿಧ ಅಂಗ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಸಮಿತಿಯ ಉಪಾಧ್ಯಕ್ಷರಾದ ಸೋಮಣ್ಣ ಡಾಣಗಲ್ಲ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ವಜ್ರ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಬೇಕಾಗಿತ್ತು. ಆದರೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದರು ಕಳೆದ 60 ವರ್ಷಗಳಲ್ಲಿ ಸಂಸ್ಥೆಯು ಈ ನಾಡಿಗೆ ಅತ್ಯಂತ ಪ್ರಭುದ್ಧ ಅಧಿಕಾರಿಗಳನ್ನು ವೈದ್ಯರುಗಳನ್ನು ಇಂಜಿನಿಯರಿಗಳನ್ನು ಕ್ರೀಡಾಪಟುಗಳನ್ನು ನೀಡಿದೆ ಎಂದರು.
ಕಳೆದ ಅನೇಕ ವರ್ಷಗಳಿಂದ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರಿಶ್ರಮದಿಂದ ಸಂಸ್ಥೆಯು ಪ್ರತಿವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹೊಂದಿ ಶಿಕ್ಷಣ ಕಾಶಿಯ ಹೆಸರಿಗೆ ತಕ್ಕಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಬಳಿಗಾರ ಅವರು ಮಾಹಿತಿ ನೀಡಿ ರವೀಂದ್ರನಾಥ ಠಾಕೂರ್ ಅವರ ವಿಶ್ವ ಭಾರತಿ ಮಾದರಿಯ ಶಿಕ್ಷಣ ಸಂಸ್ಥೆಯನ್ನು ಗ್ರಾಮದ ಅನೇಕ ಯುವಕರು ಮತ್ತು ಶಿಕ್ಷಣ ಪ್ರೇಮಿಗಳು ಗ್ರಾಮಭಾರತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ದಾನಿಗಳ ಕೊಡಗೈ ದಾನದಿಂದಾಗಿ ಶಿಕ್ಷಣ ಸಂಸ್ಥೆ ತಲೆಯೆತ್ತಿ ನಿಂತಿದೆ ಎಂದರು.
ದಿನಾಂಕ 27 ರಂದು ಶನಿವಾರ ಗ್ರಾಮಭಾರತಿ ಶಿಕ್ಷಣ ಸಮಿತಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಪ್ರೌಢ ಮತ್ತು ಮಾಧ್ಯಮಿಕ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮ ವಿದೆ ಎಂದು ಸಂಸ್ಥೆಯ ಛೇರ್ಮನ್ರಾ ದ ಎನ್ ಸಿ ಹುನಗುಂದ್ ತಿಳಿಸಿದರು.
ಶನಿವಾರ ಮುಂಜಾನೆ ಎಂಟು ಗಂಟೆಗೆ ಗ್ರಾಮಭಾರತಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಎಫ್ ಡಿ ಹುನಗುಂದ ಧ್ವಜಾರೋಹಣ ನೆರವೇರಿಸುವರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ನೆರವೇರಿಸುವರು ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಂ ಮುಂದಿನ ಮನಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್ ಪಿ ಬಳಿಗಾರ ಎಚ್‍ಎಫ್ ತಳವಾರ್ ಎಫ್ ಕೆ ಕಾಳಪ್ಪನವರ್ ಸಿಎಂ ರಾಗಿ ಡಿ. ವೈ ಹುನಗುಂದ ಆಗಮಿಸುವರು.
ಸಂಜೆ 5:00 ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಜ್ರಮಹೋತ್ಸವದ ಕಾರ್ಯಕ್ರಮಗಳ ಸಾನಿಧ್ಯವನ್ನು ಹೂವಿನ ಶಿಗ್ಲಿ ವಿರಕ್ತ ಮಠದ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಎನ್ ಸಿ ಹುನಗುಂದ್ ವಹಿಸುವರು ಮುಖ್ಯ ಅತಿಥಿಗಳಾಗಿ ಡಾಕ್ಟರ್ ಶಂಭು ಬಳಿಗಾರ್, ಲೋಕಾಯುಕ್ತ ಎಸ್ಪಿ ಶಂಕರ್ ರಾಗಿ ಆರ್‍ಎಫ್‍ಓ ಮಂಜುನಾಥ್ ನಾವಿ ಆಗಮಿಸುವರು.
ಪತ್ರಿಕಾಗೋಷ್ಠಿಯಲ್ಲಿ ಸಿಎಂ ರಾಗಿ ಸಿದ್ದಣ್ಣ ಎಲ್ಲಿಗಾರ್ ವಿ ಎಚ್ ಪವಾಡದ ಬಿಎಫ್ ತೋಟದ ಬಸವರಾಜ್ ಕಳಸದ ಎಮ್ ಎಫ್ ಹುಲಗೂರ ಎಫ್ ಕೆ ಕಾಳಪ್ಪನವರ ಮುಖ್ಯೋಧ್ಯಾಪಕರಾದ ಸಿಬಿ ಮೊಗಲಿ ಹಾಗೂ ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಯಗಳು ಪಾಲ್ಗೊಂಡಿದ್ದರು.