ವಾರ್ಷಿಕ ಸರ್ವ ಸಾಧಾರಣ ಸಭೆ

ಹುಬ್ಬಳ್ಳಿ ಡಿ 24 : ನಗರದ ದೈವಜ್ಞ ಬ್ರಾಹ್ಮಣ ಸುವರ್ಣಕಾರ್ ಕೋ – ಆಪ್ ಕ್ರೆಡಿಟ್ ಸೊಸೈಟಿ ಲಿ ಹುಬ್ಬಳ್ಳಿ ಇಂದು ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ಸತೀಶ ಶೇಜವಾಡಕರ ವಹಿಸಿದ್ದರು. ಸಭೆಯಲ್ಲಿ ಷೇರುದಾರರಿಗೆ 16% ಡಿವಿಡೆಂಡ್ ಘೋಷಿಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಇದೇ ಸಂದರ್ಭದಲ್ಲಿ 2021 ನೇ ಸಾಲಿನ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಸುಬ್ಬರಾಯ ಭಟ್ಟ್, ಹಿರಿಯರಾದ ತುಕಾರಾಮ ರಾಯ್ಕರ್, ಉಪಾಧ್ಯಕ್ಷರಾದ ವಿಷ್ಣು ರಾಯ್ಕರ್, ಎಲ್ಲ ನಿರ್ದೇಶಕರು ಸೇರಿದಂತೆ ಷೇರುದಾರ ಬಾಂಧವರು ಭಾಗವಹಿಸಿದ್ದರು.