ವಾರ್ಷಿಕ ಸರ್ವಸಾಧಾರಣ ಸಭೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ 9: ತಾಲೂಕಿನ ಪುಟ್ಟಗಾಂವ ಬಡ್ನಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸೋಮವಾರ ಸಂಘದ ಕಾರ್ಯಾಲಯದಲ್ಲಿ ಜರುಗಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಪ್ರಮುಖವಾಗಿ ಒಟ್ಟು 27 ವಿಷಯಗಳು ಪ್ರಸ್ತಾಪಿಸಲ್ಪಟ್ಟವು. ಇದರಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯು ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಇನ್ನು ಈ ಸಂಘವು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘವಾಗಿ ಮಾರ್ಪಾಡಲಾಗಲಿದೆ. ಪ್ರಮುಖ ವಿಷಯ ಸಭೆಯಲ್ಲಿ ಮಂಡಿಸಲ್ಪಟ್ಟಿತ್ತು.
ಇನ್ನು ಮುಂದೆ ಸಂಘದ ಪ್ರತಿಯೊಂದು ದಾಖಲೆಗಳನ್ನು ಗಣಿಕೀಕರಣ ಮಾಡಲು ಕೇಂದ್ರ ಸರಕಾರವೇ ಅನುದಾನ ನೀಡಲಿದೆ ಎಂದು ಹೇಳಿದ ಅವರು ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಇಲಾಖೆಯ ಸಂಘ ಎಂಬ ಆದೇಶವು ಗ್ರಾಮೀಣ ಪ್ರದೇಶದ ರೈತರಿಗೆ ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಸಹಕಾರಿ ಸಂಘಕ್ಕೂ ಸಿಲಿಂಡರ್ ವಿತರಣೆ ಕೇಂದ್ರವನ್ನು ಮಂಜೂರು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಭೆಯಲ್ಲಿ 202324ನೇ ಸಾಲಿಗಾಗಿ ಸಂಗವಸಿದ್ಧ ಪಡಿಸಿದ ಕ್ರಿಯಾಯೋಜನೆ ಅನುಮೋದನೆ ವಾರ್ಷಿಕ ಆಯವ್ಯದ ಅನುಮೋದನೆ ಸೇರಿದಂತೆ ಸಭೆಯಲ್ಲಿ ಸೇರಿದ ಎಲ್ಲ ಸದಸ್ಯರುಗಳು ಅನುಮೋದಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶಪ್ಪ ಹರದಗಟ್ಟಿಯವರು ನಿರ್ವಹಿಸಿ ಸಭೆಯಲ್ಲಿ ಕಳೆದ ಸಾಲಿನಲ್ಲಿ ನ ಕಾರ್ಯ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಿದರು.