ವಾರ್ಷಿಕ ಸಮ್ಮೇಳನ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಫೆ9: ಮೌಲಾನಾ ಶಾಕಿರಲಿ ನೂರಿ ಅಕಾಡೆಮಿ, ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿ ಘಟಕದ ವತಿಯಿಂದ ಫೆ.10 ಹಾಗೂ 11 ರಂದು ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ 26ನೇ ಸುನ್ನಿ ದಾವತೆ ಇಸ್ಲಾಮಿಯ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸುನ್ನಿ ದಾವತೆ ಹುಬ್ಬಳ್ಳಿ ಘಟಕದ ಕಾರ್ಯದರ್ಶಿ ಮಹಮ್ಮದ್ ಅಸ್ಲಂ ಮುಜಾಹಿದ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ಫೆ.10 ರಂದು ಬೆಳಿಗ್ಗೆ 10ಕ್ಕೆ ಮುಂಬೈ ಮೂಲದ ನಾಥ್ ಹಾಡುಗಾರ ಖಾರಿ ಮಹಮ್ಮದ್ ರಿಜ್ವಾನ್ ಖಾನ್ ಉದ್ಘಾಟಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಸುನ್ನು ದಾವತೆ ಇಸ್ಲಾಮಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಹಮ್ಮದ್ ಶಾಕೀರ್ ಅಲಿ ನೂರಿ, ಉತ್ತರ ಪ್ರದೇಶ ಅಲ್ ಜಾಮಿತುಲ್ ಅಶ್ರಫಿಯಾ ವಿಶ್ವವಿದ್ಯಾಲಯದ ಕುಲಪತಿ ಮುಫ್ತಿ ನಿಜಾಮುದ್ದೀನ್ ಮಿಸಬಾಹಿ, ಮಹಾರಾಷ್ಟ್ರದ ಸಯ್ಯದ್ ಅಮಿನೂಲ್ ಖಾದ್ರಿ ಪಾಲ್ಗೊಳ್ಳುವರು. ಸುನ್ನಿ ದಾವತೆ ಇಸ್ಲಾಮಿಯ ಹುಬ್ಬಳ್ಳಿ ಅಧ್ಯಕ್ಷ ಸಯ್ಯದ್ ಮೆಹಬೂಬ್ ಕಲೈಗಾರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.