ವಾರ್ಷಿಕ ಸಭೆ, ತರಬೇತಿ

ಹುಬ್ಬಳ್ಳಿ,ಡಿ.31: ಒಂದು ಸಂಸ್ಥೆಯ ಏಳ್ಗೆ, ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕನ ಕೆಲಸದ ವೈಖರಿಯನ್ನು ಅವಲಂಬಿಸಿರುತ್ತದೆ. ಅವರಿಗೆ ಸಂಸ್ಥೆಯ ಕಾನೂನು ಚೌಕಟ್ಟಿನ ಬಗ್ಗೆ ತಿಳಿವಳಿಕೆ ಇರಬೇಕೆಂದು ಧಾರವಾಡ ಜಿಲ್ಲೆಯ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ ಹೇಳಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಆಶ್ರಯದಲ್ಲಿ ಇಂದು ನಗರದ ಮಂತ್ರಾ ರೆಸಿಡೆನ್ಸಿಯಲ್ಲಿ ನಡೆದ ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳ ವಾರ್ಷಿಕ ಸಭೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು, ನಾವುಗಳು ಬದಲಾಗುವ ತಂತ್ರಜ್ಞಾನವನ್ನು ಸಕಾಲದಲ್ಲಿ ಅರಿತುಕೊಂಡು, ಅದಕ್ಕೆ ಸ್ಪಂದಿಸಿ ಗ್ರಾಹಕರಿಗೆ ನೆರವು ನೀಡಬೇಕು. ಅಂದಾಗ ಸೌಹಾರ್ದ ಸಹಕಾರಿ ಚಳುವಳಿಗೆ ಬಲ ಬರುತ್ತದೆ ಎಂದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಲೋಚನೇಶ ಹೂಗಾರ, ಜವಳಿ,ಅಂಗಡಿ ಹಾಗೂ ಜೋಶಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಜಿಲ್ಲಾ ವ್ಯವಸ್ಥಾಪಕ ಕಲ್ಮೇಶ ಸ್ವಾಗತಿಸಿದರು.