ವಾರ್ಷಿಕ ಮಹಾಸಭೆ

(ಸಂಜೆವಾಣಿ ವಾರ್ತೆ)
ಕುಂದಗೋಳ ಆ 18 : ತಾಲೂಕಿನ ಸಂಶಿಯಲ್ಲಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 24 ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಸಭಾಭವನ ಉದ್ಘಾಟನೆ ಜರುಗಿತು.
ಸಂಸ್ಥೆಯ ಅಧ್ಯಕ್ಷ ವಿ.ಡಿ.ಅಕ್ಕಿ ಅವರು ಭವನ ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಥೆಯು ಈಗಾಗಲೇ 1.06 ಕೋ. ರೂ. ಲಾಭಗಳಿಸಿದ್ದು, 34.15 ಕೋ. ಠೇವಣಿ ಹೊಂದಿದೆ. 22.00 ಕೋ. ರೂ. ಸಾಲ ನೀಡಲಾಗಿದ್ದು, 41.14 ಕೋ. ರೂ. ದುಡಿಯುವ ಬಂಡವಾಳ ಹೊಂದಿದೆ. ಸಂಸ್ಥೆ ಸದಸ್ಯರಿಗೆ 17% ರಷ್ಟು ಡಿವಿಡೆಂಡ್ ಕೂಡಾ ನೀಡಲಾಗಿದೆ ಎಂದು ಸೊಸೈಟಿ ಕಾರ್ಯ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಉಪನಿರ್ದೇಶಕ ಎ. ಬಿ. ಉಪ್ಪಿನ ಅವರು ಮಾತನಾಡಿ ಸಂಸ್ಥೆ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾಭ್ಯಾಸ ನಿಧಿಯನ್ನು ಕು. ಹೇಮಾ ಸುಂಕದ ಇವಳಿಗೆ 10 ಸಾ. ರೂ. ಹಾಗೂ ಕು. ಪ್ರಿಯಾ ಮುಂದಿನಮನಿ ಇವಳಿಗೆ 5 ಸಾ. ರೂ ನೀಡುವ ಜತೆಗೆ ಸಂಶಿ ಗ್ರಾಮದ ಪ್ರತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಗೌರವಿಸಲಾಗಿದೆ ಅಲ್ಲದೆ ಅಪಘಾತದಲ್ಲಿ ಮಡಿದ ಸಂಸ್ಥೆ ಸದಸ್ಯರಿಗೆ 15 ಸಾ. ರೂ. ಅಪಘಾತ ನಿಧಿ ನೀಡಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್. ಸಿ. ಹತ್ತಿ, ಎನ್. ಎಸ್.ಯರೇಶೀಮಿ, ಎಸ್ ಎಸ್ ಕಮ್ಮಾರ, ಎನ್. ಎಸ್. ನಾಯ್ಕರ, ಎಲ್. ವಿ. ಕೋರಿ, ಎಂ. ಆರ್. ಯಲರಡ್ಡಿ, ಜಿ.ಬಿ.ಸೊರಟೂರ, ಎಂ.ಎನ್.ಪಡೇತರ ಹಾಗೂ ವಿ. ಡಿ. ಸುಂಕದ ಸೇರಿದಂತೆ ಅನೇಕರಿದ್ದರು. ಸಂಸ್ಥೆ ಸದಸ್ಯ ಐ. ಎಂ. ಕೋರಿ ಸ್ವಾಗತಿಸಿದರು. ಮ್ಯಾನೇಜರ್ ಎಸ್. ಎಫ್. ಹತ್ತಿ ನಿರೂಪಿಸಿದರು.