
ಮುನವಳ್ಳಿ,ಏ21: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಏ.23 ರಿಂದ ಏ.27 ರವರೆಗೆ 22 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮಗಳು ಜರುಗುವವು.
ದಿ. 23 ಬೆಳಗ್ಗೆ ಕಾಕಡಾರತಿ, ರುದ್ರಾಭಿಷೇಕ, 10.30 ಕ್ಕೆ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು, ನಿತ್ಯಾನಂದ ಆಶ್ರಮದ ಮುಕ್ತಾನಂದ ಶ್ರೀಗಳು ಸಾನಿಧ್ಯದಲ್ಲಿ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಂದಿಯೊಂದಿಗೆ, ಭಜನಾ ಮೇಳ, ಜಗ್ಗಲಗಿ ಮೇಳ, ಡೊಳ್ಳಿನ ಮೇಳ, ಆರತಿ ಪೂರ್ಣಕುಂಭಗಳ ಸುಮಂಗಲೆಯರೊಂದಿಗೆ ಇಂದ್ರಪ್ರಸ್ಥ ರಾಜವೈಭವದ ರಥದಲ್ಲಿ ಶ್ರೀ ಸಾಯಿಬಾಬಾ ಭಾವಚಿತ್ರದ ಭವ್ಯ ಮೆರವಣಿಗೆ ಜರುಗುವದು.
ದಿ.24 ರಿಂದ ದಿ.27 ರವರೆಗೆ ಪ್ರತಿದಿನ ಸಂಜೆ 6-30 ರಿಂದ 8-30 ರವರೆಗೆ ಜೋಡಕುರಳಿಯ ಪ್ರವಚನಕಾರ ಶ್ರೀ ಚಿದ್ಘನಾನಂದ ಭಾರತಿ ಶ್ರೀಗಳಿಂದ ಶ್ರೀ ಸಿದ್ಧಾರೂಢರ ಮಹಾತ್ಮೆ ಪ್ರವಚನ ಜರಗುವದು. ಪ್ರತಿದಿನ ಮಹಾಪ್ರಸಾದ ವಿರುವುದು. ಎಂದು ಶ್ರೀ ಸಾಯಿ ಸೇವಾ ಸಮಿತಿಯ ಅಧ್ಯಕ್ಷ ವಿಜಯ ಅಮಠೆ ಪ್ರಕಟಣೆಯಲ್ಲಿ ತಿಳಿಸಿರುವರು.