ವಾರ್ಷಿಕೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ,ಫೆ24: ಎಸ್. ಎಸ್.ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜೀಬಾನ ಪೇಟ,ಹುಬ್ಬಳ್ಳಿ ಈ ಸಂಸ್ಥೆಯ ದಾಜಿಬಾನ ಪೇಟೆಯಲ್ಲಿರುವ, ನಗರದ ಅತೀ ಪುರಾತನ ಮಂದಿರ ಹಾಗೂ ಗ್ರಾಮದೇವತೆ ಎಂದೇ ಪ್ರಸಿದ್ಧವಾಗಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ದುರ್ಗಾದೇವಿ ಮಾತೆಯರ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯ 21ನೇ ವಾರ್ಷಿಕೋತ್ಸವ ನಿಮಿತ್ಯ, ಶ್ರೀದೇವಿಯರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ-ಪುನಸ್ಕಾರ ಹೋಮ-ಹವನಾದಿಗಳು ನಡೆದವು.
ಸಂಸ್ಥೆಯ ಉಪಮುಖ್ಯ ಧರ್ಮದರ್ಶಿಗಳಾದ ನೀಲಕಂಠ ಪಿ.ಜಡಿ ಇವರು ದಂಪತಿ ಸಮೇತ ಹೋಮದ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಮಯದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಬೆಳ್ಳಿಯ ಘಂಟೆಯನ್ನು ದೇಣಿಗೆ ನೀಡಿರುವ ವಿಠಲ ಹನುಮಂತಸಾ ಪೂಜಾರಿ ಇವರನ್ನು ಹಾಗೂ ಸಂಸ್ಥೆಯ ನೇತೃತ್ವದ ಜನತಾ ಬಜಾರ್ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ದೇವಸ್ಥಾನಕ್ಕೆ ಬೆಳ್ಳಿಯ ಛತ್ರಿಯನ್ನು ದೇಣಿಗೆ ನೀಡಿರುವ ಪ್ರಭಾಕರ ಪ್ರೇಮನಾಥಸಾ ಮೆಹರವಾಡೆ ಇವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಧರ್ಮದರ್ಶಿಗಳಾದ ತಾರಾಸಾ ಎನ್. ದೊಂಗಡಿ , ಗೌರವ ಕಾರ್ಯದರ್ಶಿಗಳಾದ ಭಾಸ್ಕರ ಎನ್. ಜಿತೂರಿ , ಕೋಶಾಧಿಕಾರಿಗಳಾದ ಅಶೋಕ ಕೆ. ಕಲಬುರ್ಗಿ ಟ್ರಸ್ಟಿಗಳಾದ ಎನ್.ಆರ್. ಹಬೀಬ, ಎ.ಪಿ.ಪವಾರ ಹಾಗು ಪೂಜಾರಿ ಮನೆತನದ ಹಿರಿಯರಾದ ವಿಷ್ಣುಸಾ ಎಲ್. ಪೂಜಾರಿ, ಅರ್ಜುನಸಾ ಪೂಜಾರಿ, ಪಾಂಡುಸಾ ಪೂಜಾರಿ, ಎಲ್ಲಪ್ಪ ಪೂಜಾರಿ, ಶಂಕರಸಾ ಪೂಜಾರಿ, ಮಂಜುನಾಥ ಪೂಜಾರಿ, ಸೂರ್ಯಕಾಂತ ಪೂಜಾರಿ , ಶಿವು ಪೂಜಾರಿ ಮತ್ತು ಘಟಕದ ಪ್ರಮುಖರಾದ ಆರ್.ಡಿ.ರತನ, ರಮೇಶ ಪಾಟೀಲ, ಗಣಪತಸಾ ಜರತರಘರ್, ಎನ್. ಐ. ಕಲಬುರ್ಗಿ, ಶ್ರೀಪ್ರಕಾಶ ಬುರಬುರೆ , ವೆಂಕಟೇಶ ಪೂಜಾರಿ, ಶ್ರೀನಿವಾಸ ರತನ, ವಿನಾಯಕ ಹಬೀಬ, ಕಿಶೋರ ರತನ ಪಾಲ್ಗೊಂಡಿದ್ದರು.