ವಾರ್ಷಿಕೋತ್ಸವ, ಕಾರ್ತಿಕ ದೀಪೋತ್ಸವ

ಹುಬ್ಬಳ್ಳಿ,ಡಿ.1: ಗೋಕುಲ ರಸ್ತೆಯಲ್ಲಿರುವ ರಾಜಧಾನಿ ಕಾಲನಿಯ ಗಣೇಶ ಈಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ದೇವಸ್ಥಾನ ಕಮಿಟಿಯವರಿಂದ ಅನ್ನಪೂರ್ಣೆಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳದ ಸದಸ್ಯರು ರಾಜಧಾನಿಕಾಲನಿ ನಿವಾಸಿಗಳು ದೇವಸ್ಥಾನದ 20 ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಿ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ಗೋಕುಲ ರಸ್ತೆಯ ಪೊಲೀಸ್ ಅಧಿಕಾರಿ ಜೆ.ಎಂ ಕಾಲಿಮಿರ್ಚಿ ಅವರು ದೀಪ ಬೆಳಗುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ರಾಜಧಾನಿ ಕಾಲನಿ, ಶಿವಪುರ ಕಾಲನಿ, ಗ್ರೀನ್ ಗಾರ್ಡ್‍ನ್, ಚವ್ಹಾಣ ಲೇಔಟ್ ನಿವಾಸಿಗಳು ಸೇರಿ ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಬೆಳಗಿಸಿ ಕಾರ್ತಿಕೋತ್ಸವಕ್ಕೆ ಮೆರಗು ತಂದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಜೆ.ಎಂ ಕಾಲಿಮಿರ್ಚಿ, ಪಾಲಿಕೆ ನೂತನವಾಗಿ ವಾರ್ಡ್ ನಂ 54 ಕ್ಕೆ ಆಯ್ಕೆಯಾದ ಸರಸ್ವತಿ ವಿನಾಯಕ ದೋಂಗಡಿ, ಪ್ರೊ. ಕೆ.ಎಸ್.ಕೌಜಲಗಿ ಅವರನ್ನು ಸನ್ಮಾನಿಸಿದರು.
ದೇವಸ್ಥಾನದ ಅಧ್ಯಕ್ಷರಾದ ಎಂ.ಎ ಹಿರೇಮಠ, ಉಪಾಧ್ಯಕ್ಷರಾದ ಕೆ.ಎಂ ಚೌದರಿ, ಕಾರ್ಯದರ್ಶಿ ಎನ್.ಬಿ ಹೊಸೂರ, ಚಕ್ಕಳಿ, ಚನ್ನಬಸಪ್ಪ ಧಾರವಾಶೆಟ್ಟರ, ಜೆ.ಎಲ್ ಹಬೀಬ, ದೇಸಾಯಿ, ಬೇವೂರ, ವಿನಾಯಕ ದಾಮೋದರ, ಶಕುಂತಲಾ ಹಿರೇಮಠ, ಮೀರಾ ರಾವ್, ರಾಧಾ ಪಾಂಡುರಂಗಿ, ಶ್ವೇತಾ ತಿಳವಳಿ, ರಾಧಾ ವೆಂಕಟಾಚಲ್, ಹೇಮಾ ಮುಂತಾದ್ದವರು ಉಪಸ್ಥಿತರಿದ್ದರು.