ವಾರ್ತಾ ಸಚಿವರ ಬೆಂಗಾಲು ವಾಹನಕ್ಕೆ ಅಘಪಾತ: ಯಾವುದೇ ಪ್ರಾಣಾಪಾಯವಿಲ್ಲ

ಚಿತ್ರದುರ್ಗ,ಜೂ.7;
ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ಸಮೀಪದ ಅತಿಥ್ಯ ಹೋಟೆಲ್ ಹತ್ತಿರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ್ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವಾಗ ಮಾರ್ಗಮಧ್ಯೆ ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ಸಮೀಪದ ಅತಿಥ್ಯ ಹೋಟೆಲ್ ಹತ್ತಿರ ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಅಡ್ಡಿ ಬಂದಿದ್ದು, ಬೆಂಗಾವಲು ವಾಹನದ ಬಾನೆಟ್ ಮಾತ್ರ ಜಖಂ ಆಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಚಿವರ ಬೆಂಗಾವಲು ವಾಹನ ಅಪಘಾತವಾದ ಹಿನ್ನಲೆಯಲ್ಲಿ ಇನ್ನೊಂದು ಬೆಂಗಾವಲು ವಾಹನದ ವ್ಯವಸ್ಥೆ ಮಾಡಿ ಸಚಿವರನ್ನು ಕಳುಹಿಸಿಕೊಡಲಾಯಿತು. ಈ ಕುರಿತು ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.