ವಾರ್ತಾ ಇಲಾಖೆ ಬಸವರಾಜ್‍ಗೆ ಆತ್ಮೀಯ ಬೀಳ್ಕೊಡುಗೆ

ದಾವಣಗೆರೆ; ಜು.೧ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರೂಪ್ `ಡಿ` ನೌಕರರಾದ ಬಿ.ಎಸ್ ಬಸವರಾಜ ಅವರಿಗೆ ಜೂನ್ 30 ರಂದು ವಯೋನಿವೃತ್ತಿ ಹೊಂದಿದ್ದು ಇಲಾಖೆಯ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಹಿರಿಯ ಸಹಾಯಕ ನಿರ್ದೇಶಕರ ಧನಂಜಯಪ್ಪ ಬಿ. ಮಾತನಾಡಿ ಸದಾ ಕ್ರಿಯಾಶೀಲತೆಯಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಲ್ಲದೇ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಗಳಲ್ಲಿಯೂ ಸಹ ಭಾಗವಹಿಸಿ,  ಇಂದು ನಿವೃತ್ತಿ ಹೊಂದಲಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರ ಸೇವಾ ಮನೋಭಾವ ಹೀಗೆ ಮುಂದುವರೆಯಲಿ ಎಂದು ಶುಭ ಆರೈಸಿದರು.ಇಲಾಖೆ ಸಿಬ್ಬಂದಿಗಳಾದ ಗಂಗಾಧರ್, ಚನ್ನಕೇಶವ, ಶೈಲ, ಶಿಲ್ಪಾ, ಗಣೇಶ್, ಉಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು