ವಾರ್ಡ್ ೭ : ಉಚಿತ ಊಟ, ನೀರು ಹಂಚಿಕೆ – ಶಾಸಕ ಶ್ಲಾಘನೆ

ರಾಯಚೂರು.ಜೂ.೦೨- ಕೊರೊನಾ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ಊಟ ಮತ್ತು ನೀರು ಇನ್ನಿತರ ಅಗತ್ಯ ಸಾಮಾಗ್ರಿ ವಿತರಿಸುವ ಮಾನವೀಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಮುಜಿಬುದ್ದೀನ್ ಅವರು ಯಾವುದೇ ಲಾಭದ ನಿರೀಕ್ಷೆಯಿಲ್ಲದೇ, ಈ ರೀತಿ ಉತ್ತಮ ಕಾರ್ಯ ಹಮ್ಮಿಕೊಂಡಿರುವುದು ಪ್ರಾಮಾಣಿಕ ಸೇವೆಯಾಗಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದ್ದಾರೆ.
ಅವರು ನಿನ್ನೆ ವಾರ್ಡ್ ೭ ರಲ್ಲಿ ಜನರಿಗೆ ಉಚಿತವಾಗಿ ಆಹಾರ ಮತ್ತು ನೀರು ಪೂರೈಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಾರ್ಡ್ ೭ ರ ಮುಖಂಡರಾದ ಅಹ್ಮದ್ ಬೇಗ್ ಅವರಿಂದ ೫೦೦ ಪ್ಯಾಕೇಟ್ ಆಹಾರ ಮತ್ತು ಕುಡಿವ ನೀರಿನ ಪೂರೈಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾ ಯಾವ ಜಾತಿ, ಧರ್ಮಗಳನ್ನಾಧರಿಸಿ ಬರುವಂತದ್ದಲ್ಲ. ಎಲ್ಲಾರೂ ಇಂತಹ ಸಂಕಷ್ಟದಲ್ಲಿ ತಮ್ಮದೇಯಾದ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಚೂರುವೊಂದು ಸೌಹಾರ್ದ ಕ್ಷೇತ್ರವಾಗಿದೆ. ಹಿಂದೂ, ಮುಸ್ಲೀಂ ಬೇದಭಾವವಿಲ್ಲದೇ ಒಗ್ಗಟ್ಟಾಗಿ ಬದುಕುವಂತಹ ಸಹೋದರತ್ವ ಇಲ್ಲಿ ಕಾಣಬಹುದಾಗಿದೆ.
ಅಹ್ಮದ್ ಬೇಗ್ ಅವರು ಈ ರೀತಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉಧಾರತೆ ಪ್ರದರ್ಶಿಸಿದ್ದಾರೆ. ಮುಜಿಬುದ್ದೀನ್ ಅವರು ಅನೇಕ ರೀತಿಯಲ್ಲಿ ಸೇವೆ ಸಲ್ಲಸಿದ್ದಾರೆ. ಎಂದೂ ಸಹ ಯಾವುದೇ ಲಾಭ ನಿರೀಕ್ಷೆಯಿಸದೇ, ಸೇವೆಯಲ್ಲಿ ತೊಡಗಿದ್ದಾರೆ. ನಮ್ಮ ಕ್ಷೇತ್ರದ ಯುವಕರು ಸಹೋದರತ್ವ ಮತ್ತಷ್ಟು ಗಟ್ಟಿಗೊಳಿಸಲು ಶ್ರಮಿಸುತ್ತಾರೆ. ಯಾರೇ ತೊಂದೆರಯಲ್ಲಿರುವ ವ್ಯಕ್ತಿ ಮುಜೀಬ್ ಅವರ ಬಳಿ ಹೋದರೇ ಅವರು ಮತ್ತೇ ಖಾಲಿ ಕೈಲಿಂದ ವಾಪಾಸ್ ಬಂದಂತಹ ನಿದರ್ಶನಗಳಿಲ್ಲ. ಮುಜೀಬ್ ಉತ್ತಮ ಹೃದಯವಂತರಾಗಿದ್ದಾರೆ. ಅವರು ಹಂಚಿ ತಿನ್ನುವ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಮತ್ತಷ್ಟು ಉನ್ನತ ಸ್ಥಾನ ಸಾಧಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಜಿಬುದ್ದೀನ್, ಅಹ್ಮದ್ ಬೇಗ್, ಗೋಪಾಲರೆಡ್ಡಿ, ಮುಕ್ತಿಯಾರ, ಕೈಸರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.