ವಾರ್ಡ್ ೬ : ನಾಯಿಗಳ ಹಾವಳಿ-ಮಿಂಚಿನ ಕಾರ್ಯಾಚರಣೆ

ರಾಯಚೂರು.ಮಾ.೨೩-ನಗರದ ವಾರ್ಡ್ ನಂ-೦೬ರಲ್ಲಿ ಸ್ಲಂ ನಾಯಿಗಳ ಹಾವಳಿಯಿಂದ ಬೇಸತ್ತ ಜನತೆ, ಕೂಡಲೆ ಸದಸ್ಯರಿಂದ ಸ್ಪಂದನೆ, ಎಚ್ಚೆತ್ತ ನಗರಸಭೆ ಅಧಿಕಾರಿಗಳು, ವಿಶೇಷ ಶ್ವಾನದಳದ ಸಿಬ್ಬಂದಿಗಳಿಂದ ಮಿಂಚಿನ ಕಾರ್ಯಾಚರಣೆ, ನಿಟ್ಟುಸಿರು ಬಿಟ್ಟ ಜನತೆ. ವಾರ್ಡಿನ ಸದಸ್ಯರಿಗೆ ಅಭಿನಂದನೆ ತಿಳಿಸಿದ ಜನತೆ.
ನಗರದ ವಾರ್ಡ್ ನಂ-೦೬ರಲ್ಲಿ ಸ್ಲಂ ನಾಯಿಗಳು ಸರಿ ಸುಮಾರು ೨೫೦ ನಾಯಿಗಳು ಜೀವಿಸುತ್ತಿದ್ದು, ಅವುಗಳಿಂದ ಜನಗರಿಗೆ ತುಂಬಾ ತೊಂದರೆಯುಂಟಾಗುತ್ತಿದ್ದು, ರಾತ್ರಿ ಹೊತ್ತಲ್ಲಿ ಕಿರುಚಾಡುವುದು ಜನರಿಗೆ ನಿದ್ದೆಮಾಡಲು ಆಗದೇ ಬೇಸತ್ತಿರುವ ಜನಸಾಮಾನ್ಯರು, ಕಿರುಚಾಟದಿಂದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡಲು ಕೂಡ ತೊಂದರೆ ಯಾಗುತ್ತದೆ,
ನೇರವಾಗಿ ಮನೆಗಳಿಗೆ ನುಗ್ಗಿ ಅಡುಗೆ ಕೋಣೆಯಲ್ಲಿರುವ ರೊಟ್ಟಿ, ಅನ್ನ, ಏನೇ ಇದ್ದರೂ ಸಹ ಅವುಗಳನ್ನು ತಿಂದು ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಕಚ್ಚಿರುವ ಉದಾಹರಣೆಗಳು ಕೂಡ ಇವೆ, ಯತಾರೀತಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಯಾರೇ ಹೋಗಲಿ ಅವರಿಗೆ ಹಿಂದಿನಿಂದ ಹೋಗಿ ಕಚ್ಚಿದ್ದೂ ಉಂಟು, ಚಿಕ್ಕಮಕ್ಕಳ ಕೈಯಲ್ಲಿರುವ ಬ್ರೆಡ್ ಇನ್ನಿತರ ಏನೇ ಇರಲಿ ಅದನ್ನು ಕಸಿದು ತಿನ್ನುವ ನಾಯಿಗಳ ಸಂಖ್ಯೆ ಹೆಚ್ಚಾಗಿದೆ,
ಜನರು ಮನೆ ಬಿಟ್ಟು ಎಲ್ಲೂ ಹೋಗದ ಹಾಗೆ ಆಗಿದೆ ಪರಿಸ್ತಿತಿ, ಇವುಗಳಿಂದ ತುಂಬಾ ತೊಂದರೆಯನ್ನು ಅನುಭವಿಸಿದ್ದೂ ಉಂಟು. ಸದರಿ ದೂರನ್ನು ನಗರದ ವಾರ್ಡ್ ನಂ-೦೬ರ ನಗರಸಭೆ ಸದಸ್ಯರ ಗಮನಕ್ಕೆ ತಂದು ಅವುಗಳಿಂದ ತೊಂದರೆಯನ್ನು ತಪ್ಪಿಸಲು ಅವರ ಗಮನಕ್ಕೆ ತಂದಾಗ ಅವರು ಈ ವಿಷಯಕ್ಕೆ ಕೂಡಲೆ ಸ್ಪಂದಿಸಿ ಎಚ್ಚೆತ್ತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ಅವುಗಳಿಗೆ ತೊಂದರೆಯನ್ನು ಕೊಡದೆ ಹಿಡಿದು ದೂರದ ಸ್ಥಳದಲ್ಲಿ ಸುರಕ್ಷಿತವಾಗಿ ಬಿಡಲು ಸೂಚಿಸಿ ಮನವಿ ಮಾಡಿದಾಗ,
ಸದರಿ ವಿಷಯವನ್ನು ಮಾನ್ಯ ನಗರಸಭೆಯ ಅಧಿಕಾರಿಗಳು ಕೂಡಲೆ ಎಚ್ಚೆತ್ತು, ಅವುಗಳನ್ನು ಹಿಡಿಯಲು ವಿಶೇಷ ಶ್ವಾನ ತಂಡಕ್ಕೆ ಸೂಚಿಸಲಾಗಿ ನಂತರ ಸದರಿ ತಂಡವು ದಿನಾಂಕ:೨೨-೦೩-೨೦೨೧ರಂದು ಬೆಳಿಗ್ಗೆ ನಗರದ ವಾರ್ಡ್ ನಂ-೦೬ರ ಹೊಸೂರಿನಲ್ಲಿ ಹಾಜರಿದ್ದು, ಜನರಿಗೆ ಯಾವ ನಾಯಿಗಳಿಂದ ತೊಂದರೆ ಇದೆಯೋ ಅಂತಹ ನಾಯಿಗಳನ್ನು ಸರಿ ಸುಮಾರು ೫೦ ನಾಯಿಗಳನ್ನು ಕೇವಲ ೩ ಗಂಟೆಯಲ್ಲಿ ಹಿಡಿದು ಅವುಗಳನ್ನು ಸುರಕ್ಷಿತವಾಗಿ ದೂರದ ಸ್ಥಳದಲ್ಲಿ ಬಿಡಲಾಯಿತು,
ಇದರಿಂದ ವಾರ್ಡಿನ ಜನತೆ ಸದರಿ ವಾರ್ಡಿನ ಸದಸ್ಯರ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಹಾಗೂ ಶ್ವಾನದಳದ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಅಭಿನಂದನೆಗಳನ್ನು ಕೋರಿದರು,