ವಾರ್ಡ್ ೩೩: ೨ ವಾರ್ಡ್ ವಿಂಗಡಣೆಗೆ ವಾಸಿಗಳ ಒತ್ತಾಯ

ರಾಯಚೂರು.ನ.೮ -ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.೩೩ರ ಯರಮರಸ್‌ನ್ನು ೨ ವಾರ್ಡುಗಳನ್ನಾಗಿ ವಿಂಗಡಿಸಬೇಕು ಎಂದು ಒತ್ತಾಯಿಸಿ ವಾರ್ಡ್ ನಿವಾಸಿಗಳು ಒತ್ತಾಯಿಸಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
,ನಗರದ ವಾರ್ಡ್ ನಂ.೩೩ ರಲ್ಲಿ ಬರುವ ಯರಮರಸ್, ಯರಮರಸ್ ದಂಡು, ಯರಮರಸ್ ಕ್ಯಾಂಪ್, ಪೋತಗಲ್, ಅಮರಾವತಿ, ಎಸ್‌ಟಿಬಿಟಿ ಏರಿಯಾ ಮತ್ತು ಯರಮರಸ್ ಸ್ಟೇಶನ್ ಸೇರಿದಂತೆ ಈ ವಾರ್ಡ್ ನಲ್ಲಿ ೭ ಬೂತ್‌ಗಳಿದ್ದು, ಬೂತ್ ನಂ.೩,೪,೫ ಯರಮರಸ್ ಆದರೆ, ಬೂತ್ ನಂ.೬ ಯರಮರಸ್ ದಂಡು, ಬೂತ್ ನಂ.೭,೮ ಯರಮರಸ್ ಕ್ಯಾಂಪ್, ಬೂತ್ ನಂ.೯ ಪೋತಗಲ್ ಆಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಬೂತ್‌ನಲ್ಲಿ ಸರಿಸುಮಾರು ೧೨೦೦-೧೫೦೦ ಮತದಾರರಿದ್ದು, ನಗರಸಭೆ ವ್ಯಾಪ್ತಿಯಲ್ಲಿಯೇ ಅತೀ ದೊಡ್ಡ ವಾರ್ಡ್ ಆಗಿದ್ದು ಮತ್ತು ೧೦ ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಈ ವಾರ್ಡಿನಲ್ಲಿ ಅತೀಹೆಚ್ಚು ಪ.ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತದಾರರಿದ್ದಾರೆ. ಇವರೆಲ್ಲರೂ ದಿನಗೂಲಿ ನೌಕರರಾಗಿದ್ದು, ಇವರ ಅಭಿವೃದ್ಧಿಗೆ ಬಹಳಷ್ಟು ಸಮಸ್ಯೆಯಾಗಿದ್ದು, ಬೀದಿ ದೀಪಗಳ ಸಮಸ್ಯೆ, ಒಳಚರಂಡಿ ಸಮಸ್ಯೆ, ಚರಂಡಿ ಸ್ವಚ್ಛತೆ ಸಮಸ್ಯೆ, ಮಹಿಳೆಯರ ಶೌಚಾಲಯದ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದರು.
ಮುಂದಿನ ನಗರಸಭೆ ಚುನಾವಣೆಯೊಳಗೆ ವಾರ್ಡ್ ನಂ.೩೩ರನ್ನು ಮರು ವಿಂಗಡಣೆ ಮಾಡಬೇಕು. ಒಂದುವೇಳೆ ಮರು ವಿಂಗಡಣೆ ಮಾಡದಿದ್ದಲ್ಲಿ ವಾರ್ಡ್ ನಂ.೩೩ರಲ್ಲಿ ಬರುವ ಎಲ್ಲಾ ಭೂತ್‌ಗಳಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್ನ ಮಾಜಿ ನಗರಸಭೆ ಸದಸ್ಯ ಶಂಶಲಮ್, ಹನುಮೇಶ ಸೇರಿದಂತೆ ವಾರ್ಡಿನ ನಿವಾಸಿಗಳು ಉಪಸ್ಥಿತರಿದ್ದರು.