ವಾರ್ಡ್ ೨೨ : ಸ್ಯಾನಿಟೈಜೇಷನ್ ಸಿಂಪಡಣೆ

ರಾಯಚೂರು.ಮೇ.೧೯- ನಗರದ ವಾರ್ಡ್ ೨೨ ರಲ್ಲಿ ಇಂದು ಸ್ಯಾನಿಟೈಜೇಷನ್ ಮಾಡಲಾಯಿತು. ಎನ್.ಎಸ್.ಬೋಸರಾಜು ಫೌಂಡೇಷನ್ ಟ್ಯಾಂಕರ್ ಮೂಲಕ ವಾರ್ಡಿನ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸ್ ಕಾರ್ಯ ನಡೆಸಲಾಯಿತು.
ನಗರಸಭೆ ಸದಸ್ಯ ಜಿಂದಪ್ಪ ಅವರು ಸ್ವತಃ ಖುದ್ಧಾಗಿ ಮುಂದೆ ನಿಂತು ಬಡಾವಣೆಯಲ್ಲಿ ಸ್ಯಾನಿಟೈಸ್ ನಿರ್ವಹಿಸಿದರು. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸೋಂಕಿನ ಸಮಸ್ಯೆ ನಿವಾರಣೆಗೆ ಈ ಸ್ಯಾನಿಟೈಜೇಷನ್ ಮಾಡಲಾಯಿತು. ಜನರು ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರದೊಂದಿಗೆ ಸುರಕ್ಷತೆ ಕಾಯ್ದುಕೊಳ್ಳಲು ಜಿಂದಪ್ಪ ಅವರು ಜನರಿಗೆ ತಿಳಿಸಿದರು.