ವಾರ್ಡ್ ೨೧ : ಟಾಸ್ಕ್ ಫೋರ್ಸ್ ಸಮಿತಿ ಸಭೆ ನಿರ್ವಹಣೆ


ರಾಯಚೂರು.ಜೂ.೦೧- ವಾರ್ಡ್ ೨೧ ರಲ್ಲಿ ಜಿಲ್ಲಾಧಿಕಾರಿಗಳು ಮತ್ತು ಶಾಸಕರಾದ ಡಾ.ಶಿವರಾಜ್ ಪಾಟೀಲ್ ಅವರ ಸೂಚನೆಯಂತೆ ಟಾಸ್ಕ್ ಫೋರ್ಸ್ ಕಮಿಟಿಯ ಮೊದಲನೆಯ ಸಭೆಯನ್ನು ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಸ್ಥಳೀಯ ಸಂಸ್ಥೆ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ಈ ಕಾರ್ಯಪಡೆಯ ನಿಯಮಗಳು ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ನಗರಸಭಾ ಸದಸ್ಯರಾದ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಎನ್.ಕೆ.ನಾಗರಾಜ ಅವರು ಮಾತನಾಡುತ್ತಾ, ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಪ್ರಮುಖವಾಗಿ ಗರ್ಭಿಣಿ ಸ್ತ್ರೀಯರು ತಪ್ಪದೆ ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ವಿಗ್ನಪ್ತಿ ಮಾಡಿದರು. ಅದೇ ರೀತಿಯಾಗಿ ಸರಕಾರದ ಕೋವಿಡ್ ನಿಯಮಾವಳಿ ಪ್ರಕಾರ ಪ್ರತಿಯೊಬ್ಬ ನಾಗರಿಕರು ೧೮ ರಿಂದ ೪೫ ರ ವಯೋಮಿತಿ ಒಳಪಟ್ಟಿರುವ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ನೇತಾಜಿ ನಗರ ಆರಕ್ಷಕ ನೀರಕ್ಷಕರು ಬಸವರಾಜ್ ರವರು ಮಾತನಾಡುತ್ತಾ, ತಮ್ಮ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಾಯ ಸಹಕಾರಗಳು ಇರುತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಾ.ಪ್ರಿಯಾಂಕಾ ರವರು ಮಾತನಾಡಿ, ಕೊರೊನಾ ರೋಗ ಬಗ್ಗೆ ಜನರಿಗೆ ಜಾಗೃತಿಯೊಂದಿಗೆ ಎಚ್ಚರಿಕೆ ನೀಡಲಾಗುತ್ತಿದೆಂದರು.
ಈ ಸಂದರ್ಭದಲ್ಲಿ ಹಿರಿಯರುಗಳಾದ ಬಿ.ಎಸ್.ಸುರಗಿ ಮಠ, ಕೆ.ಪಿ.ಅನಿಲಕುಮಾರ್ ಹಾಗೂ ಸ್ಥಳೀಯ ಯುವಕರು, ನಗರಸಭೆ ಸಿಬ್ಬಂದಿ ಅಮರೇಶ್, ಬಿಲ್ ಕಲೆಕ್ಟರ್, ಅಂಗನವಾಡಿ ಟೀಚರ್ ಉಪಸ್ಥಿತರಿದ್ದರು.