ವಾರ್ಡ್ ೧೩ : ತರಕಾರಿ ಮಾರಾಟ – ಪರಿಶೀಲನೆ

ರಾಯಚೂರು.ಮೇ.೨೭- ಕೊರೊನಾ ಲಾಕ್ ಡೌನ್ ನಂತರ ಮೂರು ದಿನಗಳ ತರುವಾಯ ಒಂದು ದಿನ ಖರೀದಿ ಅವಕಾಶ ನೀಡುವ ಜಿಲ್ಲಾಡಳಿತದ ಮೂರನೇ ಖರೀದಿ ದಿನವಾದ ಇಂದು ವಾರ್ಡ್ ೧೩ ರಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಅವರು ತರಕಾರಿ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿದರು.
ನಗರಸಭೆಯಿಂದ ತರಕಾರಿ ಮಾರಾಟಗಾರರಿಗೆ ಗುರುತಿನ ಚೀಟಿ ನೀಡಿ, ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯ ಮಾರಾಟಗಾರರಿಗೆ ಸೌಕರ್ಯಗಳ ಕುಂದುಕೊರತೆ ಬಗ್ಗೆ ಪರಿಶೀಲಿಸಿದರು. ಜಿಲ್ಲಾಡಳಿತ ನಿಗದಿಗೊಳಿಸಿದ ದರದಲ್ಲಿಯೇ ಗ್ರಾಹಕರಿಗೆ ತರಕಾರಿ ಮಾರುವಂತೆಯೂ ಸೂಚಿಸಿದರು.