
ರಾಯಚೂರು,ಮಾ.೦೨-
ವಾಕ್ ಟು ವಾರ್ಡ್ ಪರಿಣಾಮ ವಾರ್ಡ್ ನಂಬರ್ ೧೨ರಲ್ಲಿ ಹಲವು ಸೌಲಭ್ಯಗಳನ್ನು ಕಂಡಿದೆ. ನಗರ ಕಾಂಗ್ರೆಸ್ ಮುಖಂಡ ಮುಜೀಬುದ್ದಿನ್ ರ ವಾಕ್ ಟು ವಾರ್ಡ್ ಮಾಡಿದ ನಂತರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ವಾರ್ಡ್ ಗೆ ವಿದ್ಯುತ್ ದೀಪಗಳ ಅಳವಡಿಕೆ, ಶೌಚಾಲಯ ನಿರ್ಮಾಣ, ಚರಂಡಿ ದುರಸ್ತಿಗೊಂಡ ನಂತರ ಈಗ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಜೋರಾಗಿ ನಡೆದಿದೆ.
ವಾರ್ಡ್ ನಂಬರ್ ೧೨ರಲ್ಲಿ ರಸ್ತೆಗಳು ತಗ್ಗುನಿಂದ ಕೂಡಿವೆ. ಓಡಾಡಲು ಮಹಿಳೆಯರಿಗೆ,ವೃದ್ಧರಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ವಾಹನಗಳ ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ. ಈ ಹಿನ್ನೆಲೆ ಮುಜೀಬುದ್ದಿನ್ ಅವರು ಅನಾನುಕೂಲತೆ ಇರುವ ರಸ್ತೆಗಳಿಗೆ ಡಾಂಬರೀಕರಣಗೊಳಿಸುವ ಪ್ರಕ್ರಿಯೆ ಶುರು ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಕಾಮಗಾರಿ ಕೈಗೊಂಡಿದ್ದು ಜನರ ಅನುಕೂಲತೆಗೆ ಈ ವಾಕ್ ಟು ವಾರ್ಡ್ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂಬುವುದು ಉಲ್ಲೇಖಾರ್ಹ. ಈಗಾಗಲೇ ಸುಮಾರು ೧೭ ವಾರ್ಡ್ ಗಳಲ್ಲಿ ಮತ್ತು ೧೧ ಗ್ರಾಮಗಳಲ್ಲಿ ವಾಕ್ ಟು ವಾರ್ಡ್ ಕಾರ್ಯಕ್ರಮದ ಮೂಲಕ ಅಲ್ಲಿನ ಸಮಸ್ಯೆಗಳಿಗೆ ತಿಲಾಂಜಲಿ ಕೊಟ್ಟಿರುವ ಮುಜೀಬುದ್ದಿನ್ ಕಾರ್ಯ ಶ್ಲಾಘನೀಯ.