ವಾರ್ಡ್ ೦೨ರಲ್ಲಿ ಟಾಸ್ಕ್ ಫೋರ್ಸ್ ಸಭೆ


ರಾಯಚೂರು.ಜೂ.೦೧-ನಗರದ ವಾರ್ಡ್ ನಂ: ೦೨ರ ಪ್ರಮುಖ ರಸ್ತೆಯ ಮಾರ್ಗದಲ್ಲಿ ಕರೋನಾ ಟಾಸ್ಕ್ ಫೋರ್ಸ್ ಸಮಿತಿಯ ಈ ಹಿಂದೆ ನಗರಸಭೆಯ ಸದಸ್ಯರಾದ ಜಯಣ್ಣ ಮತ್ತು ನಗರ ಆರೋಗ್ಯ ಕೇಂದ್ರದ ಡಾ.ಲಲಿತಾ ಅವರ ನೇತೃತ್ವದಲ್ಲಿ ನಡೆದ ಸಭೆಯ ತಿರ್ಮಾನದಂತೆ ವಾಡ್೯ನ ಮುಖ್ಯ ರಸ್ತೆ ಮತ್ತ ಬಡಾವಣೆಗಳ ರಸ್ತೆಯಲ್ಲಿ ಕರೋನ ವೈರಸ್ ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬ್ಯಾನರ್ ಗಳನ್ನು ಕಟ್ಟುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಈ ದಿನ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ಮೌನೇಶ ಅವರು ವಾರ್ಡ್ನ ಜನರನ್ನು ಉದ್ದೇಶಿಸಿ ಮಾತನಾಡಿ ಕರೋನ ವೈರಸ್ ನ ಯಾವುದೇ ರೋಗ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಲು
ಮನೆ ಮನೆಗೆ ತೆರಳಿ ಯಾರಿಗಾದರೂ
ಜ್ವರ, ಕೆಮ್ಮು,ಇಂತಹ ಲಕ್ಷಣಗಳಿದ್ದರೆ ಅವರಿಗೆ ಆಸ್ಪತ್ರೆಗೆ ತೋರಿಸಲು ಮನವೊಲಿಸುವ ಕೆಲಸವನ್ನು ನಡೆಸಲಾಗುತ್ತಿದೆ. ಈ ರೋಗ ನಿಯಂತ್ರಣಕ್ಕೆ ತಾವೂಗಳು ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಚಿನ್ ಕುಮಾರ ಜಯಣ್ಣ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಅರುಣ್ ಕುಮಾರ್, ಅನ್ನಪೂರ್ಣ, ನಾಗರತ್ನ, ಶ್ರೀಶೈಲ,ಹಾಗೂ ಬಿಜಿವಿಎಸ್ ನೂತನರಾಜ್ ಅವರು ಉಪಸ್ಥಿತರಿದ್ದರು.