ವಾರ್ಡ್ ಸಮಿತಿ ಸದಸ್ಯರ ಅಂತಿಮ ಪಟ್ಟಿಗೆ ಮನವಿ: ನರಗುಂದ


ಹುಬ್ಬಳ್ಳಿ,ಜೂ.1: ಹು-ಧಾ ಪಾಲಿಕೆ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ರಚನೆ ಕುರಿತು ಸರ್ವಾನುಮತದ ನಿರ್ಣಯದ ಅನುಸಾರವಾಗಿ ತಕ್ಷಣವೇ ನಾಗರಿಕರಿಂದ ಹೆಚ್ಚಿನ ಅರ್ಜಿಗಳಿಗಾಗಿ ಅಧಿಸೂಚನೆ ಹೊರಡಿಸಿ, ಜುಲೈ ತಿಂಗಳಿನ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ಸದಸ್ಯರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಮನವಿ ಮಾಡುತ್ತೇವೆಂದು ಜನಾಗ್ರಹ ರಾಷ್ಟ್ರೀಯ ಮುಖ್ಯಸ್ಥ ಸಂತೋಷ್ ನರಗುಂದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಷ್ಟ್ 15 ರ ಒಳಗೆ ಪಾಲಿಕೆ ಆಯುಕ್ತರು ವಾರ್ಡ್ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯು ವಿಶೇಷ ಸದನ ಸಮಿತಿ ಒಪ್ಪಿಸಿದ ವರದಿಯ ಅಂಶಗಳನ್ನು ಪರಿಗಣಿಸಿ, ವಾರ್ಡ್ ಸಮಿತಿ ಸಭೆಗಳಿಗೆ ಚಾಲನೆ ನೀಡಬೇಕೆಂದು ಪಾಲಿಕೆ ಸಭೆಯಲ್ಲಿ ನಿರ್ಣಯಗೊಂಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ಜುಲೈ ತಿಂಗಳಿನ ಎರಡನೇ ವಾರದೊಳಗೆ ಸಂಪೂರ್ಣ ಅವಳಿ ನಗರಗಳ ವಾರ್ಡ್ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ನಿಯಮಾನುಸಾರ ಆಯ್ಕೆಗೊಂಡ ಸಮಿತಿ ಸದಸ್ಯರ ಅಂತಿಮ ಪಟ್ಟಿಯನ್ನು ಜುಲೈ ತಿಂಗಳಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆಗಾಗಿ ಸಲ್ಲಿಸಬೇಕು.
2017 ರಿಂದಲ್ಲೇ ವಾರ್ಡ್ ಸಮಿತಿ ಬಳಗದ ಹೋರಾಟ ಆರಂಭವಾಗಿದ್ದು, ಈಗಾಗಲೇ ರಾಜ್ಯದ 11 ಮಹಾನಗರಗಳಲ್ಕಿ ವಾರ್ಡ್ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದ ಅವರು ಜೂನ್ 1 ರಂದು ರಾಷ್ಟ್ರೀಯ ಸ್ವರಾಜ್ಯ ದಿನವಾಗಿ ಆಚರಣೆ ಮಾಡಲು ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ವಾರ್ಡ್ ಸಮಿತಿ ಸದಸ್ಯರ ಪಟ್ಟಿಯ ಅಧಿಕೃತ ಅನುಮೋದನೆ ಪಡೆದು ಪಾಲಿಕೆಯ ಸರ್ವಾನುಮತದ ನಿರ್ಣಯದಂತೆ, ಅಗಷ್ಟ್ 15 ರಂದು ಸ್ಥಳೀಯ ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಕಾರ್ಯರೂಪಕ್ಕೆ ತರಲು ಅನಾನುಕೂಲಕರವಾಗುತ್ತೆ ಈ ನಿಟ್ಟಿನಲ್ಲಿ ಪಾಲಿಕೆಯಿಂದ ಸ್ವೀಕೃತವಾದ ಒಟ್ಟು ಅರ್ಜಿಗಳ ವಲಯವಾರು ವಾರ್ಡ್ ವಾರು ಮತ್ತು ವರ್ಗವಾರು ಮಾಹಿತಿಯನ್ನು ಹು-ಧಾ ವಾರ್ಡ್ ಬಳಗ ಸಮಿತಿಗೆ ಒದಗಿಸಿದರೇ ನಮ್ಮ ಬಳಗದ ಸದಸ್ಯರು ಆ ಮಾಹಿತಿ ಆಧರಿಸಿ ಅವಶ್ಯವಿದ್ದ ಸ್ಥಾನಗಳಿಗೆ ಸೂಕ್ತ ಅರ್ಜಿಗಳನ್ನು ನಾಗರಿಕರಿಂದ ಸಂಗ್ರಹಿಸಲು ಒಪ್ಪಿಗೆ ಮಾಡಿಕೊಡಲು ಸಿದ್ಧರಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಷ್ ಬಬ್ರುವಾಡ, ಲಿಂಗರಾಜ ಧಾರವಾಡಶೆಟ್ಟರ್, ಶಿವಬಸವ ನವಲಿ, ಶಿವಶಂಕರ್ ಐಹೊಳಿ, ಮೃತ್ಯುಂಜಯ ಉಪಸ್ಥಿತರಿದ್ದರು.