ವಾರ್ಡ್ ಸಮಿತಿ ರಚನೆಗೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ಪಾಲಿಕೆಯಿಂದ ನಗರದಲ್ಲಿ ವಾರ್ಡ್ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಸಾಮಾಜಿಕ ಕಳಕಳಿಯ ಗುಂಪೊಂದು ಇಂದು ಪಾಲಿಕೆ ಆಯುಕ್ತರು ಮತ್ತು ಮೇಯರ್ ಅವರಿಗೆ ಮನವಿ ಮಾಡಿದೆ.
ಗುಂಪಿನಲ್ಲಿ   ವಕೀಲರಾದ  ಡಿ. ಮಹೇಂದ್ರನಾಥ  ಮತ್ತು ಹೋರಾಟಗಾರರಾದ ಕೆ.ರಾಮಿರೆಡ್ಡಿ,  ಜಲ್ಲಿ ಹನುಮಂತಪ್ಪ, ಕೆ.ಯರಿಗೌಡ, ಹೋರಾಟಗಾರರಾದ ಆರ್ ವೆಂಕಟರೆಡ್ಡಿ ಮತ್ತು ಅಲ್ಲಿ ಪುರ ಶ್ರೀನಿವಾಸರೆಡ್ಡಿ, ಶಿವ ಸಾಗರ,  ಶಿವ ಶಂಕರ್ ಮೊದಲಾದವರು  ಇದ್ದರು.
ಮನವಿ ಸ್ವೀಕರಿಸಿದ ಆಯುಕ್ತರು ಈ ದಿಶೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಯವ ಭರವಶೆ ನೀಡಿದ್ದಾರಂತೆ.