
ನವಲಗುಂದ,ಅ.12: 6ನೇ ವಾರ್ಡಿನ ಅನೇಕ ಸಮಸ್ಯೆಗಳ ಕುರಿತು ಸದಸ್ಯರ ಬಳಿ ಅನೇಕ ಬಾರಿ ಪ್ರಸ್ತಾಪ ಮಾಡಿದರು ಸಮಸ್ಯೆಗೆ ಸ್ಪಂದಿಸಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ನಾಗರಿಕರು ಪುರಸಭೆಯ ಶೋಭಾ ಹೆಬ್ಬಳ್ಳಿ ಯವರ ಮೂಲಕ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಎಚ್.ಪಿ. ಪೆಟ್ರೋಲ್ ಪಂಪ್ ಹಿಂದೆ ಇರುವ ಹೇಬಸೂರರವರ ಪ್ಲಾಟ್, ಗೌಡ್ರ ಪ್ಲಾಟ್, ಗುಳೇದ ಪ್ಲಾಟ್ ಧಾರವಾಡದವರ ಪ್ಲಾಟ್ ಗಳಲ್ಲಿ ಸುಮಾರು ವರ್ಷಗಳಿಂದ ರಸ್ತೆ ಕಾಮಗಾರಿಯಾಗದೆ ಇರುವುದರಿಂದ ಇಲ್ಲಿಯ ಚರಂಡಿಗಳು ಹಾಳಾಗಿವೆ. ಭಾರದ ವಾಹನಗಳ ಸಂಚಾರ ನಿರಂತರವಾಗಿದ್ದು ಮನೆಯ ನಳದ ಪೈಪ್‍ಲೈನ್ ಲಿಕೇಜ್ ಹಂತ ತಲುಪಿವೆ.
ರಸ್ತೆಗಳು ಹದಗೆಟ್ಟಿದ್ದು, ವಯೋವೃದ್ಧರಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮುಖ್ಯಾಧಿಕಾರಿಗಳು 5 ಹಾಗೂ 6 ನೇ ವಾರ್ಡಿನ ಸಮಸ್ಯೆ ಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಪುರಸಭೆ ಎದುರು ಧರಣಿ ಕೂಡುವುದಾಗಿ ವಾರ್ಡ ನಾಗರೀಕರು ಎಚ್ಚರಿಸಿದರು.
ಪ್ರಕಾಶ ನಾಗರಹಳ್ಳಿ, ಆರ್.ಬಿ. ಮದುಗುಣಕಿ, ಹುಚ್ಚಪ್ಪ ಡೊಳ್ಳನವರ, ಎನ್.ಎನ್. ಹಾಲಗೇರಿ, ಕೆ.ಎನ್. ನದಾಫ್, ಆನಂದ ನಾಯ್ಕ, ಮಂಜುಳಾ ನಾಗರಹಳ್ಳಿ, ಲಕ್ಷ್ಮಣ ಗುಳೇದ, ಎಮ್. ಆರ್. ಬಸವಂತಕರ, ಮಲ್ಲಿಕಾರ್ಜುನ ಜಂಗಣ್ಣವರ, ಸುಶ್ಮಿತಾ ನಾಗರಹಳ್ಳಿ, ರಾಜು ತಹಸೀಲ್ದಾರ, ಧರ್ಮರಾಜ ಗುಳೇದ ಇತರರು ಇದ್ದರು.