ವಾರ್ಡ್ ಸಂಖ್ಯೆ ೨೨ ರ ಉಪ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

ಸಿಂಧನೂರು.ಡಿ.೮- ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ ೨೨ ರ ನಗರಸಭೆ ಸದಸ್ಯ ಮುನೀರ್ ಪಾಷಾ ಅವರ ಅಕಾಲಿಕ ಮರಣದಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ತಿಳಿಸಿದೆಂದು ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ ತಿಳಿಸಿದರು.
ನಗರದ ತಹಶಿಲ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ನಗರಸಭೆ ಸದಸ್ಯರ ಮರಣದಿಂದ ತೆರವು ಗೊಂಡಿದ್ದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ದಿನಾಂಕ ಡಿ.೮ ರಿಂದ ೧೫ ವರೆಗೆ, ನಾಮಪತ್ರ ಪರಿಶೀಲನೆ ಡಿ. ೧೬, ನಾಮಪತ್ರ ಹಿಂಪಡೆಯಲು ಡಿಸೆಂಬರ್ ೧೮ ಕೊನೆಯ ದಿನ ಹಾಗೂ ಚುನಾವಣೆ ಡಿ.೨೭ ರಂದು ನಡೆಯಲಿದ್ದು, ಅದರ ಫಲಿತಾಂಶ ವನ್ನು ಡಿ.೩೦ ರಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ವಾರ್ಡ್ ಸಂಖ್ಯೆ ೨೨ ರಲ್ಲಿ ಮಾತ್ರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಲು ಅನುಮತಿ ಇಲ್ಲ ಮತ್ತು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲಾಗುತ್ತದೆಂದು ಆಸಕ್ತರು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮ ಪತ್ರಗಳನ್ನು ಇಂದಿನಿಂದ ನಗರಸಭೆ ಕಾರ್ಯಾಲಯದಲ್ಲಿ ಸಲ್ಲಿಸಬಹುದಾಗಿದೆಂದು ಮಾಹಿತಿ ನೀಡಿದರು.
ಪೌರಾಯುಕ್ತ ಮಂಜುನಾಥ ಗುಂಡೂರು, ಇಒ ಚಂದ್ರಶೇಖರ ಉಪಸ್ಥಿತರಿದ್ದರು.