ವಾರ್ಡ್ ನಿವಾಸಿಗಳಿಗೆ ಮೂಲಭೂತ ಸೌಕರ್ಯ – ಆದ್ಯತೆ

ರಾಯಚೂರು.ಡಿ.೩೧- ವಾರ್ಡ್ ಜನರಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ನಗರಸಭೆ ಸದಸ್ಯರಾದ ಸಾಜೀದ್ ಸಮೀರ್ ಅವರು ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಪ್ರತಿ ಮನೆಗೂ ಈ ಕ್ಯಾಲೆಂಡರ್ ತಲುಪಿಸುವ ಮೂಲಕ ಅವರಿಗೆ ಎಲ್ಲಾ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಸಮಸ್ತ ವಾರ್ಡ್ ಮತ್ತು ಜಿಲ್ಲೆಯ ಜನರಿಗೆ ಹೊಸ ವರ್ಷ ಶುಭವಾಗಲೆಂದು ಹೇಳಿದ ಅವರು, ಕಳೆದ ವರ್ಷ ಕೊರೊನಾ ಮಹಾಮಾರಿ ತಂದ ಆರ್ಥಿಕ ಸಂಕಷ್ಟು ಇನ್ನೂ ನಿವಾರಣೆಗೊಂಡು ಹೊಸ ಬದುಕು ಆರಂಭಗೊಳ್ಳಲಿ ಎಂದು ಹಾರೈಸಿದರು. ಕ್ಯಾಲೆಂಡರ್ ಮಾರುಕಟ್ಟೆ ವ್ಯವಸ್ಥಾಪಕ ಆಸೀಫ್ ಅವರು ಮಾತನಾಡಿ, ಸಮೀರ್ ಅವರು ಜನಪರ ಕಾರ್ಯಗಳಿಗಾಗಿ ಹಲವು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಡಾವಣೆಯ ಜನ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಕ್ಯಾಲೆಂಡರ್ ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿ ಎಂದು ಮುದ್ರಿಸಲಾಗಿದೆ. ಈ ಸಂದರ್ಭದಲ್ಲಿ ಮಹ್ಮದ್ ಖಾದ್ರಿ, ತಿಮ್ಮಾರೆಡ್ಡಿ, ವಾಹೀದ್, ಸುನೀಲ್ ಕುಮಾರ, ಹಾಜೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.