ವಾರ್ಡ್ ನಂ.೪: ೮೮ ಲಕ್ಷ ಕಾಮಗಾರಿಗೆ ಚಾಲನೆ

ರಾಯಚೂರು.ಡಿ.೨೮- ನಗರದ ವಾರ್ಡ್ ನಂ.೪ ರಲ್ಲಿ ಕರ್ನಾಟಕ ಭಾಗ್ಯ ಜಲ ನಿಗಮ ಯೋಜನೆಯಡಿ ಒಟ್ಟು ೮೮ ಲಕ್ಷ ರೂ. ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಈ ಕಾಮಗಾರಿಗೆ ಚಾಲನೆ ನೀಡಿದರು. ವಿವಿಧ ರಸ್ತೆ ಕಾಮಗಾರಿಗಳ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಈ.ವಿನಯ್ ಕುಮಾರ್, ಆರ್‌ಡಿಎ ಅಧ್ಯಕ್ಷರಾದ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯರಾದ ಬಿ.ರಮೇಶ್, ಈಶಪ್ಪ, ಶಶಿ, ಅಂಬಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.