ವಾರ್ಡ್ ನಂ ೧೨ ಟಾಸ್ಕ್ ಪೋರ್ಸ್ ಸಭೆ

ರಾಯಚೂರು.ಮೇ.೨೮.ಜಿಲ್ಲಾಧಿಕಾರಿಗಳು ಮತ್ತು ನಗರ ಶಾಸಕರದ ಡಾ. ಎಸ್ ಶಿವರಾಜ್ ಪಾಟೀಲ್ ಅವರ ಸೂಚನೆಯಂತೆ ನಗರದ ವಾರ್ಡ್ ನಂ ೧೨ರಲ್ಲಿ ಕೋವಿಡ ೧೯ ಟಾಸ್ಕ್ ಪೋರ್ಸ್ ಕಮಿಟಿಯ ಮೊದಲನೆಯ ಸಭೆಯನ್ನು ಅಶೋಕ್ ಡಿಪೋ ಬಡಾವಣೆಯಲ್ಲಿ ಇಂದು ಸ್ಥಳೀಯ ಸಂಸ್ಥೆ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ಈ ಕಾರ್ಯಪಡೆಯ ನಿಯಮಗಳು ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ನಂತರ ನಗರ ಸಭೆ ಅಧ್ಯಕ್ಷ ಈ.ವಿನಯ ಕುಮಾರ ಅವರು ಮಾತನಾಡುತ್ತ ಕೋವಿಡ್ ಎರಡನೇ ಅಲೆನ್ನು ತಡೆಯಲು ಜಿಲ್ಲಾಡಳಿತ ನಗರ ಸಭೆಗೆ ಸೂಚನೆ ನೀಡಿದ್ದು ಟಾಸ್ಕ್ ಪೋರ್ಸ್ ಕಮಿಟಿಯನ್ನು ರಚಿಸಿದ್ದು ಈ ಸಮಿತಿಯು ಕೇವಲ ಕಾಟಾಚಾರಕ್ಕೆ ಆಗಬಾರದು ಬಡಾವಣೆಯ ಮುಖಂಡರು,ಆಶಾ ಕಾರ್ಯಕರ್ತೆಯರು ದಿನದ ೨೪ ಗಂಟೆ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರು,ಬಡಾವಣೆಯ ಮುಖಂಡರು,ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.