ವಾರ್ಡ್. ನಂ,೩೪: ವಾಕ್ ಟು ವಾರ್ಡ್ ಕಾರ್ಯಕ್ರಮ

ರಾಯಚೂರು- ವಾರ್ಡ್ ನಂಬರ್ ೩೪ರಲ್ಲಿ ಬರುವ ಅಸ್ಕಿಹಾಳದ ರಸ್ತೆ ನಿರ್ಮಾಣ,ಚರಂಡಿ ಸರಿಪಡಿಸುವುದು, ಬೀದಿ ದೀಪ ಅಂಗನವಾಡಿ ಹಾಗೂ ಮೂರು ಮನೆಗಳನ್ನು ನಿರ್ಮಿಸಿ ಕೋಡುತ್ತೇನೆ,ಕಡುಬಡವರಿಗೆ ಮನೆ, ದೇವಸ್ಥಾನಕ್ಕೆ ಕಟ್ಟೆ,೫೦ ಲೈಟ್ ವ್ಯವಸ್ಥೆ ಮಾಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಮುಜೀಬುದ್ದಿನ್ ಅವರು ಭರವಸೆ ನೀಡಿದರು.
ಇಂದು ವಾಕ್ ಟು ವಾರ್ಡ್ ಕಾರ್ಯಕ್ರಮದ ಪ್ರಯುಕ್ತ ಅಸ್ಕಿಹಾಳ್ ವಾರ್ಡ್ ನ ಮನೆ ಮನೆಗೆ ಭೇಟಿ ನೀಡಿದ ಅವರು, ವಾರ್ಡ ನಂಬರ್ ೩೪ರಲ್ಲಿ ಬರುವ ಸರಕಾರಿ ಅಂಗನವಾಡಿ ಕೇಂದ್ರ ಕಟ್ಟಡ ಬಿದ್ದು ಹೋಗಿದ್ದರ ಬಗ್ಗೆ ಗಮನಿಸಿದ ಅವರು, ಇಲ್ಲಿನ ಮಕ್ಕಳು ಅಂಗನವಾಡಿಗೆ ಬರುವುದರಿಂದ ಶಿಕ್ಷಣವಂತರಾಗುತ್ತಾರೆ. ಆ ಉದ್ದೇಶದಿಂದ ಅಂಗನವಾಡಿ ಕಟ್ಟಡ ಸರಿಪಡಿಸಿ ಅನುಕೂಲತೆ ಕಲ್ಪಿಸುತ್ತೇನೆ ಎಂದು ಹೇಳಿದರು. ಮಳೆ ಬಂದರೆ ನಮ್ಮ ಮನೆಗಳಿಗೆ ನೀರು ಬರುತ್ತವೆ ಎಂದು ಅಳಲು ತೋಡಿಕೊಂಡ ಮಹಿಳೆಯರ ಕಷ್ಟಕ್ಕೆ ಧಾವಿಸಿದ ಮುಜೀಬುದ್ದಿನ್ ಅವರು, ೩ ಜನ ಮಹಿಳೆಯ ಕುಟುಂಬಕ್ಕೆ ಮನೆಗಳನ್ನು ೨೦ದಿನದೋಳಗೆ ಕಟ್ಟಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದು ಅಲ್ಲಿ ತನಕ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಿ ಎಂದಾಗ ಅಲ್ಲಿದ್ದ ಜನರು ಹರ್ಷಗೊಂಡರು.
ಹದಗೆಟ್ಟಿರುವ ಚರಂಡಿಗಳನ್ನು ಸಂಪೂರ್ಣವಾಗಿ ಸರಿ ಪಡಿಸಿಕೋಡುವೆ ಎಂದರು.ತುಂಬಾ ದಿನಗಳಿಂದ ಸಮಸ್ಯೆಯಾಗಿ ಉಳಿದಿರುವ ೩ ರಸ್ತೆಗಳಿಗೆ ಅಡ್ಡವಾಗಿರುವ ಜಂಗಲ್ ಕಟೀಂಗ್ ಹಾಗೂ ಮರಮ್ ಹಾಕಿಸಿ ಕೊಡುವುದಾಗಿ ಹೇಳಿದರು. ಕತ್ತಲಿನಿಂದ ಕೂಡಿದ ವಾರ್ಡ್ ಗೆ ೫೦ ಹೊಸ ಲೈಟ್ ಗಳನ್ನು ಹಾಕಿಸಿ ಕೊಡುವೆ ಎಂದರು.
ಆಸ್ಕಿಹಾಳ ಯುವಕರ ಸಂಘದ ಮನವಿ ಮೇರೆಗೆ, ಕೆಂಚಮ್ಮ ದೇವಾಸ್ಥಾನದ ಮುಂದೆ ಹಾಸನದ ವ್ಯವಸ್ಥೆ ಹಾಗೂ ಕಟ್ಟೆ ನಿರ್ಮಾಣ ಮಾಡುವುದಾಗಿ ತಿಳಿಸಿದ ಅವರು, ಇಂದಿನಿಂದಲೆ ಕೆಲಸಗಳು ಆರಂಭವಾಗಲಿವೆ ಎಂದೂ ಭರವಸೆ ಕೊಟ್ಟರು. ಈ ವೇಳೆ ಜನರ ಗುತ್ತಿಗೆದಾರ ಕರಿಯಪ್ಪ ಮಾತಮಾಡಿ, ಕಷ್ಟಗಳಿಗೆ ಸ್ಪಂದಿಸುವ ಮುಜೀಬುದ್ದಿನ್ ಅವರನ್ನು ನಾವೆಲ್ಲಾರು ಸೇರಿ ಮುಂದಿನ ಶಾಸಕರನ್ನಾಗಿ ಆಯ್ಕೆಮಾಡೋಣ ಎಂದು ಭರವಸೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ತಿಮ್ಮಪ್ಪ ನಾಯಕ,ಯುವ ಮುಖಂಡರಾದ ಸುಧಾಕರ. ಶಿವು ವೆಂಕಟೇಶ, ಬಿ.ಎಸ್, ಕೃಷ್ಣ. ನರಸಿಂಹ, ಮಹಾಂತೇಶ,ಬಸವರಾಜ್,ಶೀನು,ರಾಜು,ಪ್ರವೀಣ್, ಗೋಪಾಲ್,ಸ್ವಾಮಿ,ಶರಣಪ್ಪ,ಖಾಜಾ,
ಆಂಜೀನಯ್ಯ,ಮಲ್ಲೇಶ ಬೇಲ್ದಾರ,ಅಂಜೀ,ಕೀಶೋರ್ ಕುಮಾರ,ದತ್ತು,ಪ್ರಕಾಶ್,ಅಸ್ಕಿಹಾಳಯುವಕರ ಸಂಘದ ಅದ್ಯಕ್ಷರಾದ ಯುವರಾಜ್,ಉಪಾಧ್ಯಕ್ಷರಾದ ವಿಷ್ಣು,ಉಮೇಶ್ ಸೇರಿದಂತೆ ಅನೇಕರು ಇದ್ದರು.