ಕೋಲಾರ,ಜು,೧೩- ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಮಂಗಳವಾರ ಬೆಳ್ಳಂಬೆಳಿಗ್ಗೆ ನಗರದ ೧೨ ವಾರ್ಡಿಗೆ ಭೇಟಿ ನೀಡಿ ನಗರಸಭೆಯ ಸ್ವಚ್ಚತಾ ಕಾರ್ಯಕ್ರಮಗಳನ್ನು ಪರಿಶೀಲಿಸಿ ತೀವ್ರ ಅಸಮಾಧಾನ ವ್ಯಕ್ತ ಪಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು,
ರಸ್ತೆ ಬದಿಗಳ ಚರಂಡಿಗಳಲ್ಲಿ ಕಸದ ರಾಶಿ ತುಂಬಿರುವುದು ಕಂಡು ಚರಂಡಿಗಳನ್ನು ಸ್ವಚ್ಚತೆ ಮಾಡದಿದ್ದರೆ ಕಲ್ಮಶ ನೀರು ಹೇಗೆ ಹರಿಯುತ್ತದೆ – ಚರಂಡಿಗಳಲ್ಲಿ ನೀರು ಹರಿಯದೆ ಸೊಳ್ಳೆಗಳು ಹೆಚ್ಚಾಗಿ ನಗರದಲ್ಲಿ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂಬ ಪರಿಜ್ಞಾನ ಇಲ್ಲವೆ ? ಎಂದು ಅರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು,
ರಸ್ತೆಗಳಲ್ಲಿನ ಕಸದ ರಾಶಿಗಳನ್ನು ಕಂಡು ದಿನವು ಸ್ವಚ್ಚತೆ ಮಾಡುವುದಿಲ್ಲವೇ ‘ಎಷ್ಟು ದಿನಗಳಿಗೆ ಸ್ವಚ್ಚತಾ ಕಾರ್ಯ ಮಾಡುತ್ತಿರಿ’ ? ದಿನವು ವಾರ್ಡ್‌ಗಳಿಗೆ ಭೇಟಿ ನೀಡಿ ಕಾರ್ಮೀಕರು ಮಾಡುವ ಸ್ವಚ್ಚತೆಯ ಕೆಲಸಗಳನ್ನು ಪರಿಶೀಲಿಸುವುದಿಲ್ಲವೇ ಮೇಸ್ತ್ರಿಗಳು ಏನು ಮಾಡುತ್ತಿರುತ್ತಾರೆ ಎಂದು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು,
ಕುಡಿಯುವ ಶುದ್ದ ನೀರಿನ ಘಟಕಗಳಿಗೆ ಬೀಗ ಜಡಿದು ಎಷ್ಟು ದಿನಗಳಾಗಿವೆ, ಇದೇನೂ ಕುಡಿಯುಲು ನೀರು ಪೂರೈಕೆಗೂ ಅಥವಾ ಅಲಂಕಾರಿಕಾ ಪೆಟ್ಟಿಗೆಗಳೂ ಎಂದು ನಗರಸಭೆ ಪೌರಾಯುಕ್ತರನ್ನು ಪ್ರಶ್ನಿಸಿದರು, ಸಂಬಂಧ ಪಟ್ಟವರಿಗೆ ಸಮರ್ಪಕವಾಗಿ ನಿರ್ವಾಹಣೆ ಮಾಡಲು ನೋಟಿಸ್ ಜಾರಿ ಮಾಡಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು,
ಟೀಕಲ್ ರಸ್ತೆಯಲ್ಲಿ ಸಫಲಮ್ಮ ದೇವಾಲದ ಸುತ್ತ ಮುತ್ತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನದ ಮುಂಭಾಗದ ಪೆಟ್ಟಿಗೆ ಅಂಗಡಿಗಳ ಮುಂದಿರುವ ಕಸದ ರಾಶಿಗಳನ್ನು ಕಂಡು ಇಲ್ಲಿ ಹೇಳುವವರು ಕೇಳುವವರು ಇಲ್ಲವೆನ್ರಿ ? ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸುವುದು ಹೇಗೆ ? ಎಂದು ಪ್ರಶ್ನಿಸಿದರು, ಈ ಭಾಗದಲ್ಲಿ ಶಾಲೆ ಇದೆ. ಪಾರ್ಕ್ ಇದೆ, ಜನ ನಿಭೀಡ ರಸ್ತೆಗಳಲ್ಲಿ ಈ ರೀತಿ ಅವ್ಯವಸ್ಥೆಗಳು ಇದ್ದರೆ ಹೇಗೆ ನಗರಸಭೆ ಇದೆಯೋ ಇಲ್ಲವೂ ಎಂದು ಯಾರಾದರೂ ಕೇಳುವುದಿಲ್ಲವೇ? ಮೊದಲು ಸ್ವಚ್ಚತಾ ಕಾರ್ಯ ಕೈಗೊಳ್ಳಿ, ಸ್ವಲ್ಪವೂ ಕಸ ಕಣ್ಣಿಗೆ ಬಾರದು ಮುಂದೆ ಇದೇ ರೀತಿ ಕಸದ ರಾಶಿಗಳು ಅಂಗಡಿಗಳ ಮುಂದೆ ಕಂಡು ಬಂದರೆ ಅಂಥಹ ಅಂಗಡಿಗಳನ್ನು ಮುಲಾಜಿಲ್ಲದೆ ತೆರವು ಮಾಡಿಸಿ ಎಂದು ನಗರಸಭೆಯ ಸಿಬ್ಬಂದಿಗಳಿಗೆ ತಾಕೀತು ಮಾಡಿದರು,
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ, ಕಂದಾಯ ಅಧಿಕಾರಿಗಳಾದ ಅನಿಲ್, ಮಾನೆ, ಇಂಜನಿಯರ್ ರಾಜಗೋಪಾಲ್, ಮುಂತಾದವರು ಇದ್ದರು.