ವಾರಿಯರ್ಸ್ ನೇಮಕ ಆದೇಶ ಪತ್ರ ನೀಡಲು ಒತ್ತಾಯ

ರಾಯಚೂರು, ಜೂ.೯- ಕೋವಿ ಡ್ -೧೯ ವಾರಿಯರ್ಸ್ ಗಳಾಗಿ ಕೆಲಸ ಮಾಡುವ ಅಂಗನವಾಡಿ ನೌಕರರಿಗೆ ಕೋವಿಡ್ -೧೯ ವಾರಿಯರ್ಸ್ ಎಂದು ನೇಮಕ ಮಾಡಿರುವ ಆದೇಶ ಪತ್ರ ನೀಡಬೇಕೆಂದು ಒತ್ತಾಯಿಸಿ ಸಿಐಟಿಯು ಮುಖಂಡರು ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಿದ್ದು ಮತ್ತು ಅವುಗಳ ಪತ್ತೆಗಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಟಾಸ್ಕ್ ಫೋರ್ಸ್ ಸಮಿತಿಗಳಲ್ಲಿ ಸದಸ್ಯರುಗಳನ್ನಾಗಿ ಸೇರಿಸಿ ಅವರನ್ನು ಮನೆ ಮನೆಗೆ ತೆರಳಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಮನೆ ಮನೆ ಸಮೀಕ್ಷೆಯಲ್ಲಿ ಜ್ವರ ಜೊತೆಗೆ ತಲೆ ನೋವು , ಬೇದಿ , ನೆಗಡಿ , ಇತರೆ ಅಂಶಗಳ ಇದ್ದವರನ್ನು ಗುರ್ತಿಸಿ ಅವರಿಗೆ ಜಿಲ್ಲಾಡಳಿತ ನೀಡುವ ಔಷಧ ಕಿಟ್ಟು ವಿತರಣೆ ಕಾರ್ಯ ನಿರ್ವಹಿಸುತ್ತೇವೆ.ಆದರೆ ಈ ಸಂಬರ್ಧದಲ್ಲಿ ಯಾರಿಗಾದರೂ ಸೋಂಕು ತಗಲಿ ಜೀವನಕ್ಕೆ ಅಪಾಯ ಆಗಿ ಮರಣ ಹೊಂದಿದರೆ ಅಂತವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೋವಿಡ್ -೧೯ ವಿಮಾ ಸೌಲಭ್ಯ ಯೋಜನೆ ಘೋಷಿಸಿದೆ. ಈ ವಿಮಾ ಸೌಲಭ್ಯ ಪಡೆಯಬೇಕಾದರೆ ವಿಮಾ ನಿಗಮದವರು ತಾವು ಕೋವಿಡ್ -೧೯ ವಾರಿಯರ್ಸ್ ಎಂದು ಹೇಗೆ ನಂಬುವುದು? ತಾವು ಕೆಲಸ ಮಾಡಿದ ಅವರಿಂದ ಕೋವಿಡ್ -೧೯ ವಾರಿಯರ್ಸ್ ಎಂದು ಪ್ರಮಾಣ ಪತ್ರ ಇದ್ದರೆ ಮಾತ್ರ ವಿಮೆ ಸೌಲಭ್ಯ ಪಡೆಯಲು ಸಾಧ್ಯ ಎನ್ನುತ್ತಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಸುಮಾರು ೩೦ ಜನ ಕಾರ್ಯಕರ್ತೆಯರು ಸೊಂಕಿಗೆ ಬಲಿಯಾಗಿದ್ದು,ಅದರಲ್ಲಿ ಇಬ್ಬರಿಗೆ ಮಾತ್ರ ಈ ವಿಮಾ ಸೌಲಭ್ಯ ನೀಡಲಾಗಿದೆ
.ಉಳಿದ ೨೮ ಜನರಿಗೆ ಕೋವಿಡ್ ವಾರಿಯರ್ಸ್ ಎಂದು ನೇಮಕಗೊಂಡ ಪತ್ರ ಇಲ್ಲದಿರುವುದರಿಂದ ಅವರಿಗೆ ಪರಿಹಾರ ನೀಡಿರುವುದಿಲ್ಲ.ಆದ್ದರಿಂದ ಕೋವಿಡ್ ವಾರಿಯರ್ಸ್ ಆಗಿ ಮನೆ ಮನೆಗೆ ಹೋಗಿ ಕೆಲಸ ಮಾಡಬೇಕಾದರೆ ನಮ್ಮ ಎಲ್ಲರಿಗೆ ಕೋವಿಡ್ -೧೯ ಅಂಗನವಾಡಿ ಕಾರ್ಯಕರ್ತೆ ವಾರಿಯರ್ಸ್ ಎಂದು ನೇಮಕಾತಿ ಆದೇಶ ಪತ್ರವನ್ನು ನೀಡಬೇಕು . ಆ ಮೂಲಕ ನೌಕರರ ಜೀವನದ ಭದ್ರತೆಗೆ ತಾವು ಮುಂದಾಗಬೇಕು ಇಲ್ಲವಾದರೆ ದಿ : ೦೭.೦೬.೨೦೨೧ ರಿಂದ ೧೦.೦೬,೨೦೨೧ ರವರೆಗೆ ಎರಡನೇ ಸುತ್ತಿನ ಮತ್ತು ೧೪.೦೬.೨೦೨೧ ರಿಂದ ೧೭.೦೬.೨೦೨೧ ರವರೆಗೆ ನಡೆಯುವ ಮೂರನೇಯ ಸುತ್ತಿನ ಸರ್ವೆ ಕಾರ್ಯ ನಿಲ್ಲಸಬೇಕಾಗುತ್ತದೆ ಆದ್ದರಿಂದ ಅಧಿಕಾರಿಗಳು ಕೂಡಲೇ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ವಾರಿಯರ್ಸ್‌ಗಳೆಂದು ನೇಮಕಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಚ್.ಪದ್ಮ,ಪಾರ್ವತಿ,ಸೇರಿದಂತೆ ಇತರರು ಉಪಸ್ಥಿತರಿದ್ದರು.